Verse 1

ಸೌಭಾಗ್ಯವನ್ನೀಯುವ ಸ್ವದೇಶವೆ
ನಾ ಸೇರೊದು ಯಾವಾಗ ನಿನ್ನೊಳಗೆ.
ನಾನಿಲ್ಲಿ ಪ್ರವಾಸಿಯೂ ಯಾತ್ರಿಕನೂ
ಭೂಲೋಕದಿ ಶಾಂತಿಯ ಕಾಣೆನೆಂದೂ.
ಹಾ ಸ್ವದೇಶ ಸ್ವದೇಶವೆ
ನಿರೀಕ್ಷಿಪೆ ನಿತ್ಯವು ನಾ ನಿನ್ನನೆ.

Verse 2

ನಂಗಿಲ್ಲ ಪ್ರಾವಾಸದಿ ಸಂತೃಪ್ತಿಯು
ಮೃಷ್ಟಾನ್ನವು ಹತ್ತದು ಸ್ವಾದೆಂದಿಗು.
ಇದ್ದಾಗ್ಯು ಸನ್ಮಾನವು ಸಂಪತ್ತಿಯು
ಕಾನಾನಿನ ಆಶೆ ಹೆಚ್ಚಾಗಿಹುದು.
ಹಾ ಸ್ವದೇಶ ಸ್ವದೇಶವೆ
ನಿರೀಕ್ಷಿಪೆ ನಿತ್ಯವು ನಾ ನಿನ್ನನೆ.

Verse 3

ನಿನ್ನಲ್ಲಿ ನನ್ನಾಪ್ತರು ಯಾವಾಗಲು
ಸಂರಕ್ಷಿಸು ಕರ್ತ ನಮ್ಮಾಪ್ತನನು
ಎಂಧೇಳುತ ಸ್ವಾಮಿಗೆ ನಿತ್ಯದಲು.
ನಂಗಾಗಿ ವಿಜ್ಞಾಪನೇ ಮಾಡುವರು.
ಹಾ ಸ್ವದೇಶ ಸ್ವದೇಶವೆ
ನಿರೀಕ್ಷಿಪೆ ನಿತ್ಯವು ನಾ ನಿನ್ನನೆ.

Verse 4

ಉಪದ್ರಂಗಳ್ ಮುತ್ತಿದರೂ ಇಹದಿ
ಕೈ ಬಿಟ್ಟರೂ ಮಿತ್ರರು ನಿರ್ದಯದಿ.
ನಾ ಹರ್ಷಿಪೆ ನಿನ್ನಲ್ಲಿ ಉಲ್ಲಾಸಿಸಿ
ವಿಶ್ರಾಂತಿಯ ಹೊಂದುವೆ ಸ್ವಗೃಹದಿ.
ಹಾ ಸ್ವದೇಶ ಸ್ವದೇಶವೆ
ನಿರೀಕ್ಷಿಪೆ ನಿತ್ಯವು ನಾ ನಿನ್ನನೆ.

Verse 5

ಸ್ವದೇಶದ ಸೌಖ್ಯವ ಯೋಚಿಸಲು.
ಭೂಲೋಕದ ಭೋಗ ಬರೇಕಸವು.
ಇಲ್ಲಿಲ್ಲ ವಿಶ್ರಾಂತಿಯು ಎಂದೆಂದಿಗು
ತಂದೇ ಮನೆಯಲ್ಲಿಯೇ ವಿಶ್ರಾಂತಿಯು.
ಹಾ ಸ್ವದೇಶ ಸ್ವದೇಶವೆ
ನಿರೀಕ್ಷಿಪೆ ನಿತ್ಯವು ನಾ ನಿನ್ನನೆ.

Go to top