Verse 1

ಆಹಾ ಸ್ವದೇಶವು
ಗೊತ್ತಾಯಿತು.
ಅಲ್ಲಿಯ ಜನರು
ಸಂತೃಪ್ತರು.
ರಕ್ಷಕ ಯೇಸುವು
ಸ್ತೋತ್ರ ಹೊಂದ ಯೋಗ್ಯನು
ಅನ್ನುತ ಹಾಡ್ವರು
ಯಾವಾಗಲು.

Verse 2

ಆ ಒಳ್ಳೆ ದೇಶಕೆ
ಹೋಗೋಣ ಬಾ
ತಾಮಸ ಮಾಡದೆ
ಈಗಲೇ ಬಾ.
ಎಷ್ಟೆಷ್ಟೊ ಸೊಗಸು
ನಾವು ಉಣ್ಣುತ್ತಿರ್ವೆವು
ಕಣ್ಣೀರು ಕಾಣೆವು
ಎಂದೆಂದಿಗು.

Verse 3

ಆ ಭವ್ಯ ದೇಶದೊಳ್
ಹೋದವರೇ
ತಂದೆಯ ಹತ್ರದೊಳ್
ಧನ್ಯರಲ್ಲೆ?
ಸುಂದರ ದೇಶಕೂ
ಜೀವದ ಕಿರೀಟಕೂ
ಹೊಂಟೋಡುತ್ತಿರುವೆ
ದಣಿಯದೆ.

Go to top