Verse 1

ನಮ್ಮ ಆಯುಸು
ಬಹು ಸ್ವಲ್ಪವು
ಬೇಗ ಬಪ್ಪುದಂತ್ಯಶ್ವಾಸ
ಲೋಕ ಕೊಡುವೀ ವಿಲಾಸ
ಬಹು ಕಾಲವು
ನಿಲ್ಲಲಾರದು.

Verse 2

ವ್ಯರ್ಥ ಭ್ರಮೆಯು
ಇನ್ನು ಬೇಡವು.
ಚುರುಕಾದ ಬುದ್ದಿಯನ್ನು
ಹೃದ್ವಿಶುದ್ಧಭಾವವನ್ನು
ಕೊಡು ನಮಗೆ
ಪ್ರಿಯ ಕರ್ತನೆ.

Verse 3

ಇಂದು ನಮ್ಮದು
ನಾಳಿನಾಪತ್ತು
ಪೂರ್ಣ ಮರ್ಮವಿರಲಾಗಿ
ನಿತ್ಯ ಆತ್ಮ ಸುಖಕಾಗಿ
ನೋಡದವನೇ
ಮೂಢನಲ್ಲವೇ?

Verse 4

ನನ್ನ ಆತ್ಮಕೆ
ಒಂದೆ ಯೋಚನೆ
ಈ ಪ್ರಪಂಚವೆಲ್ಲ ಲಯ
ಏಕ ಗತಿ ನಿನ್ನ ದಯ
ದಯವೆನಗೆ
ಕೊಡು ಯೇಸುವೆ.

Go to top