Verse 1

ಜೀವಾಂತ್ಯ ಕಾಲ ಯಾರು ಬಲ್ಲ?
ಮೃತ್ಯೆನ್ನ ಬೆನ್ನು ಬಿಡದು
ಇಂದೂ ಶರೀರ ಸ್ಥಿರವಲ್ಲ
ನಾ ತೃಣಪ್ರಾಯದವನು.
ಕ್ರಿಸ್ತ್ಯೇಸು ರಕ್ತಕಾಗಿಯೇ
ಸುಮೃತಿ ಕೊಡು ದೇವರೇ.

Verse 2

ಹೊತ್ತಾರೆ ನಿದ್ದೆ ತಿಳಿದಾಗ
ಸಂಜೇ ಪ್ರಸ್ತಾಪವರಿಯೆ
ಭೂಮಿಲಿ ವಾಸ ಮಾಡುವಾಗ
ಬಿಡಾರ ಸ್ಥಿರವಹುದೇ?
ಕ್ರಿಸ್ತ್ಯೇಸು ರಕ್ತಕಾಗಿಯೇ
ಸುಮೃತಿ ಕೊಡು ದೇವರೇ.

Verse 3

ನನ್ನಾತ್ಮ ಜೀವಕಾಲದಲ್ಲಿ
ಜೀವಾತ್ಯಂವನ್ನು ನೆನಸು
ಕ್ರಿಸ್ತ್ಯೇಸುನಾಥ ಮೃತಿಯಲ್ಲಿ
ವಿಶ್ವಾಸಿಯಾಗಿ ಮುಣುಗು.
ಕ್ರಿಸ್ತ್ಯೇಸು ರಕ್ತಕಾಗಿಯೇ
ಸುಮೃತಿ ಕೊಡು ದೇವರೇ.

Verse 4

ನಾ ಬಾಳುತೇನೆ ಯೇಸುವಲ್ಲಿ
ಯಾರಗಲಿಸ ಬಲ್ಲರು?
ಕೈ ಹಾಕಿ ಯೇಸುಪಕ್ಕೆಯಲ್ಲಿ
ನನ್ನೀಶ ದೇವ ಅಂಬೆನು.
ನಿ ಹೊಯ್ದ ರಕ್ತಕಾಗಿಯೆ
ಸುಮೃತಿ ಕೊಡು ಯೇಸುವೇ.

Verse 5

ಪಿತಾ ಪವಿತ್ರ ಸ್ನಾನದಿಂದ
ನಿಂಗಿಷ್ಟ ಪುತ್ರನಾದೆನು
ಅಂದ್ಯೇಸುನಾಥ ಕೃಪೆಯಿಂದ
ನಿನ್ನೋಲ್ಮೆ ಸ್ಥಿರವಾಯಿತು.
ಸ್ವಪುತ್ರ ರಕ್ತಕಾಗಿಯೆ
ಸುಮೃತಿ ಕೊಡು ದೇವರೇ.

Verse 6

ಕ್ರಿಸ್ತ್ಯೇಸು ದೇಹರಕ್ತವನ್ನ
ನಾನಿಲ್ಲಿ ತಿಂದು ಕುಡಿದೆ
ನನ್ನವನಾಗಿದ್ದಾನೆ ಇನ್ನು
ನಾನಾತನ್ನನು ಬಿಟ್ಟೇನೆ?
ಕ್ರಿಸ್ತ್ಯೇಸು ರಕ್ತಕಾಗಿಯೇ
ಸುಮೃತಿ ಕೊಡು ದೇವರೇ.

Verse 7

ನಾನಿಂದು ನಾಳೆ ಸತ್ತರೇನು?
ವಿಶ್ವಾಸ ಕಳೆದಂಜಲೋ?
ನನ್ನಲ್ಲಿ ಕಾಣ್ಬ ದೋಷವೇನು?
ಕ್ರಿಸ್ತ್ಯೇಸು ನೀತಿ ಸಾಲದೋ?
ಕ್ರಿಸ್ತ್ಯೇಸು ರಕ್ತಕಾಗಿಯೇ
ಸುಮೃತಿ ಕೊಡು ದೇವರೇ.

Verse 8

ಸಂತೃಪ್ತನಾಗಿ ಬಾಳುತೇನೆ
ಸ್ವಚಿಂತೆಯೆಲ್ಲ ಮರೆತು
ನಿನ್ನಲ್ಲಿ ದೃಢನಗಿದ್ದೇನೆ
ನಿನ್ನಿಚ್ಛೆ ನನ್ನ ಸುಖವು.
ಅಮೂಲ್ಯ ಕ್ರಿಸ್ತ ರಕ್ತವೆ
ಸುಮೃತಿಯಿಯ್ವದೆನಗೆ.

Go to top