Verse 1

ನನ್ನ ದೇಹವೇ ನೀನೇಳುವಿ
ವಿಶ್ರಾಂತಿ ತೀರಿಸಿ
ನಿರ್ಲಯವಾಗಿ
ನೀ ಕರ್ತಗೆದುರಾಗಿ
ನಿಂತಿರುವಿ ನಿಂತಿರುವಿ.

Verse 2

ಭೂಮಿಯಲ್ಲಿ ಬಿದ್ದ ಬೀಜವು
ವಸಂತ ಬರಲು
ಊಜ್ಜೀವಿಸೋದು
ಈ ದೇಹಕೂ ಬರೋದು
ವಸಂತವು ವಸಂತವು.

Verse 3

ಹರ್ಷ ಸ್ತೋತ್ರವಾಗೊ ದಿನವೇ
ನನ್ನಾತ್ಮದಾಶೆಯೇ
ತುತೂರಿರಾಗ
ಸಮಾಧಿಗಿಳಿದಾಗ
ನಾನೇಳುವೆ ನಾನೇಳುವೆ.

Verse 4

ಸ್ವಪ್ನ ಕಂಡ ಹಾಗೆ ಇರುವೆ
ಆ ದಿನ ಬರಲೆ
ಈ ಪಾಪಭಾರ
ಈ ಕಾಡಿನ ಸಂಚಾರ
ತೀರುತ್ತದೆ ತೀರುತ್ತದೆ.

Verse 5

ನನ್ನ ಕರ್ತನನ್ನು ನೋಡುವೆ
ಆ ಲೋಕದೊಳಗೆ
ಪ್ರವೇಶ ಮಾಡಿ
ಕಾರುಣ್ಯವಂ ಕೊಂಡಾಡಿ
ನಾ ಹಾಡುವೆ ನಾ ಹಾಡುವೆ.

Go to top