Verse 1

ಇಂದು ಬಂದು ನಲಿದಾಡಿ
ಮಕ್ಕಳೇ ವೃದ್ಧರೇ
ನರರೆಲ್ಲ ಹಾಡಿ
ಇಂದು ಸರ್ವ ವಿಶ್ವ ಶಾನೆ
ಹಾಡುತೆ ಪಾಡುತ್ತೆ
ಕ್ರಿಸ್ತ ಹುಟ್ಟಿದ್ದಾನೆ.

Verse 2

ದಿವ್ಯ ಪ್ರಭೆಯೊಳಗಿಂದ
ಇಳಿದ ಒಡೆಯ
ಕನಿಕರದಿಂದ
ಎಂಥಾ ದಿವ್ಯ ಮಮಕಾರ
ನೋಡಿರಿ ನಂಬಿರಿ
ದೇವರವತಾರ.

Verse 3

ಹೌದು ದೇವರ ಕುಮಾರ
ನಮ್ಮನು ದೇವರು
ತಳ್ಳಿ ಬಿಡಲಾರ
ಏಕಪುತ್ರನನ್ನು ಇತ್ತ
ಮನಸ್ಸು ದೊಡ್ಡದು.
ಆಹಾ ಎಂಥಾ ಚಿತ್ತ.

Verse 4

ಗೋದಲೀಲಿ ಕಂಡ ಕಂದ
ನಿನಗೂ ನನಗೂ
ಹೀಗೆ ಕರೆದಂದ
ಚಿಂತೆ ಬಿಡು ಪಾಪದಿಂದ
ಬಂದದು ಹೋಗೋದು
ನನ್ನ ಪ್ರೀತಿಯಿಂದ.

Verse 5

ಹಿರಿಕಿರಿ ಜನ ಬರ್ರಿ
ಸ್ತುತಿಸಿ ಕೀರ್ತಿಸಿ
ಯುಕ್ತ ಯಜ್ಞ ತರ್ರಿ
ನಿಮ್ಮನಿಷ್ಟು ಪ್ರೀತಿ
ಮಾಡಿದಾತನ ಸತತ
ಪ್ರತಿ ಪ್ರೀತಿ ಮಾಡಿ.

Verse 6

ಕ್ರೂಜೆಹೊರೆ ಹೊತ್ತುಕೊಂಡು
ದಣಿದ ದಾರಿಗ
ಬಾ ಬಾ ಧೈರ್ಯಗೊಂಡು
ನೋಡು ನಿನ್ನ ಭಾರವನ್ನು
ಇಳಿಸ ಇಳಿದ
ಸೇರೀ ಶೂರನನ್ನು.

Verse 7

ಅಂತಃಸಾಕ್ಷಿಯಿಂದ ಕಷ್ಟ
ಪಾಪದ ತಾಪವ
ಪಡುವಂಥ ಭ್ರಷ್ಟ
ಬಾ ಬಾ ಮಾಡು ನಮಸ್ಕಾರ
ಈತನೆ ನಿನಗೆ
ಆದ ಸ್ವರ್ಗದ್ವಾರ.

Verse 8

ನರ ಮತ್ತು ದೂತ
ಸೇನೆಯೊಡನೆ ನಿನಗೆ
ಅಡ್ಡಬೀಳುತ್ತೇನೆ.
ಅಹಾ ಮುದ್ದು ಶಿಶು ಯೇಸು
ನಿನ್ನನು ನೋಡಿದ್ದು
ನನಗಾಯ್ತು ಲೇಸು.

Verse 9

ನಿನ್ನ ನೇತ್ರಕಾಂತಿಯಿಂದ
ಹೋಯಿತು ಕತ್ತಲು
ಮನದೊಳಗಿಂದ
ಹೋಯಿತೆನ್ನ ವ್ಯಥೆಯೆಲ್ಲ
ಮಡಿಯು ಆಯಿತು
ತನುಮನವೆಲ್ಲ.

Go to top