Verse 1

ಈ ಭೂಮಿಗಂಟೊದೇತಕೆ?
ನನ್ನಾತ್ಮ ಮೇಲಕೇರು
ನಿನ್ನಡೆ ದೇವಲೋಕವೆ
ಸ್ವಸ್ಥಲದಲ್ಲಿ ಸೇರು.

Verse 2

ಈ ಭ್ರಾಂತಿ ಯಾಕೆ? ನಿನಗೆ
ಈ ಲೋಕ ಕೊಡೊದೇನು?
ಆ ಲೋಕದಾಶೆ ಇದ್ದರೆ
ಈ ಲೋಕಭೋಗವೇನು?

Verse 3

ದೇವಜ್ಞನಾದ ಕ್ರೈಸ್ತಗೆ
ಭೂಸಂಗ ಹಿತವಲ್ಲ
ಸದ್ಭಕ್ತ ದೇವರಲ್ಲಿಯೆ
ಸಂತೃಪ್ತನಾಗ ಬಲ್ಲ.

Verse 4

ಕೇಡೆನ್ನ ಮೇಲೆ ಬಿದ್ದರೂ
ನಿರಾಶೆ ಪಡೆನಯ್ಯ
ನಿನ್ನಕ್ಷಿಕಾಂತಿ ನಿತ್ಯವೂ
ಉತ್ಸಾಹವೆನಗಯ್ಯ.

Verse 5

ಭೂಲೋಕ ಬೀಡು ಮಾತ್ರವೇ
ನಂಗಲ್ಲಿ ಸ್ವಾಸ್ತ್ಯವಿಲ್ಲ.
ಸ್ವಪಟ್ಣ ಪರಲೋಕದ್ದೇ
ಅಲ್ಲ್ಯರ್ತಿ ಕುಂದೊದಿಲ್ಲ.

Verse 6

ಸ್ವದೇಶವಲ್ಲಿ ಅಲ್ಲಿಯೆ
ನಿರಂತಜೀವಜಲ.
ಹೋರಾಡುವಂಥ ಬಂಟಗೆ
ಅಲ್ಲೆ ವಿಶ್ರಾಂತಿಸ್ಥಲ.

Verse 7

ಕ್ರಿಸ್ತ್ಯೇಸು ಅಲ್ಲಿ ಪ್ರಭೆಯ
ಸಾಮ್ರಾಜ್ಯ ಸ್ಥಾಪಿಸೋನು
ಸದ್ಭಕ್ತ ಕ್ರಿಸ್ತಘನದ
ಸಾರೂಪ್ಯ ಪಡೆಯೋನು.

Verse 8

ಉದ್ಧಾರಿ ಇಹಗಾಡಿನೊಳ್
ಕಟಾಕ್ಷದಿಂ ಕಾಪಾಡು
ಆ ಪರರಜ್ಯಸುಖದೊಳ್
ನನ್ನನ್ನು ಸೇರ ಮಾಡು.

Go to top