Verse 1

ನಾನೀಗ ಬಿಟ್ಟಿದ್ದೇನೆ
ನಿನ್ನಾಶೆ ಲೋಕವೆ
ಅಸಹ್ಯಗೊಂಡಿದ್ದೇನೆ
ನಿನ್ನ ವೈಯ್ಯಾರಕೆ.
ನಾನೆಂದಿಗೂ ಉಲ್ಲಾಸ
ನಿನ್ನಲ್ಲಿ ಕಾಣೆನು.
ಮೇಲ್ಲೋಕದಲ್ಲಿ ವಾಸ
ನಮ್ಮಪ್ಪನೀಯ್ವನು.

Verse 2

ಮೇಲಾದ ಅನ್ನಪಾನ
ಕೊಡೋನು ತಂದೆಯು
ಆರೋಗ್ಯಕರ ಸ್ನಾನ
ದೇವಾತ್ಮನೀಯ್ವನು.
ನಾ ಲೋಕದಲ್ಲಿ ಶಾನೆ
ದರಿದ್ರನಾದರು
ಅಲ್ಲೆನ್ನ ಕರ್ತ ತಾನೆ
ಸೌಭಾಗ್ಯವೀಯ್ವನು.

Verse 3

ಹಸಿವೆ ತಾಳ್ದವಂಗೆ
ಸಂತೃಪ್ತಿ ಪರದೊಳ್
ಸಂತಸ ದುಃಖಿತಂಗೆ
ವಾಗ್ದತ್ತ ದೇಶದೊಳ್.
ನಮ್ಮಪ್ಪ ಒರಸೋನು
ಕಣ್ಣೀರುಧಾರೆಯ
ಅಮೃತ ಉಣ್ಣಿಸೋನು
ಇದೆಂಥ ಸಂತಸ.

Go to top