Verse 1

ಈ ಲೋಕ ಬಿಟ್ಟು ಹೊಗ
ಸಂತೋಷ ಪಡುವೆ.
ಕ್ರಿಸ್ತ್ಯೇಸು ನನ್ನ ಭೋಗ
ನಿರಂತ್ರ ನಿನ್ನಲೆ.
ಸುಕ್ಷೇಮದಂಗಿಯ
ನೀ ನಂಗೆ ತೊಡ ಕೊಟೆ
ಪಾಪಿಷ್ಠ ನಾನು ಉಟ್ಟೆ
ಸುನೀತಿವಸ್ತ್ರವ.

Verse 2

ಸರ್ವೇಶದೃಷ್ಟಿಯಲ್ಲಿ
ಸ್ವನೀತಿ ಹೇಸಿಕೆ
ಸರ್ವಜ್ಞ ನೋಡುವಲ್ಲಿ
ಕಳಂಕ ತೋರದೆ?
ನಂಗೇನು ಪುಣ್ಯವು?
ಎಲ್ಲೆಲ್ಲು ಕೆಟ್ಟ ಕಲೆ
ಹರ್ಕಾದ ಜೇಡಬಲೆ
ಶೃಂಗಾರವಾಗದು.

Verse 3

ದಯಾಳು ದೇವರನ್ನು
ವಿಶ್ವಾಸಿಸುತ್ತಲೇ
ಸುಕ್ಷೇಮವಸ್ತ್ರವನ್ನು
ನಿಂಗಾತನೀಯನೇ?
ನಿಂಗೀಯ್ವನತನು
ಸಂಜೀವವೆಂಬ ಮಾಲೆ.
ಪ್ರಾಣಾ ನರ್ಕಾಗ್ನಿಜ್ವಾಲೆ
ನಿನ್ನನ್ನು ಮುಟ್ಟದು.

Verse 4

ಈ ವಸ್ತ್ರ ಕೊಳ್ಳಲಾರೆ
ನಿರ್ಲಜ್ಜಾಪಾಪಿಯು
ಸರ್ವೇಶನೀ ಶೃಂಗಾರ
ವಿಶ್ವಾಸಿಗೀಯ್ವನು.
ಕೃಪಾಳು ಅರಸ
ಈ ನೀತಿವಸ್ತ್ರವಿತ್ತು.
ಮಾಂಸಾಶೆಯೆಲ್ಲ ಕಿತ್ತು
ಬೀಸಾಡು ನನ್ನಿಂದ.

Verse 5

ನೀನಿತ್ತ ವಸ್ತ್ರವನ್ನು
ನಾ ಸಾಯುವನಕ
ಕಾಪಾಡು ಬುದ್ಧಿಯನ್ನು
ಈಯ್ ನನಗೊಡೆಯ
ತುತೂರಿ ಕೇಳಲು
ಈ ವಸ್ತ್ರವುಟ್ಟು ಏರಿ
ನೀ ಕೂತ ಪೀಠ ಸೇರಿ
ಸಂತೃಪ್ತನಾಹೆನು.

Go to top