Verse 1

ಈ ಭೂಮಿ ಬಿಡುವಾಗ
ನಂಗೆಲ್ಲಿ ವಸ್ತಿಯು?
ಈ ವಸ್ತ್ರ ಮಾಸಿದಾಗ
ನಂಗೇನು ಗತಿಯು?
ಕ್ರಿಸ್ತ್ಯೇಸುಸ್ವಾಮಿಯು
ದುರಾತ್ಮರಲ್ಲಿ ಸಾಗ
ಸೈತಾನ ವಶವಾಗ
ಬಿಟ್ಟಾನೇ ನನ್ನನು?

Verse 2

ಅಶೋಕಸ್ಥಾನದಲ್ಲಿ
ನಿವಾಸ ಮಾಡುವೆ
ನಾ ವಜ್ರಕಾಯದಲ್ಲಿ
ನಿರಂತ್ರ ಮೆರ್ಯುವೆ
ಸಂದೇಹವಿಲ್ಲವು
ಪವಿತ್ರ ದೇವರನ್ನು
ಪುನೀತ ಸಭೆಯನ್ನು
ನಾ ಸೇರಿಕೊಂಬೆನು.

Verse 3

ನನಾತ್ಮ ಬೇಡ ದುಃಖ
ಪ್ರಪಂಚತ್ಯಾಗಕೆ
ನಿಂಗಹುದಲ್ಲಿ ಸುಖ
ಅನಂತ ಕಾಲವೆ
ಅನರ್ಘ್ಯ ಭಾಗ್ಯವಂ
ಸ್ವಾಧೀನ ಮಾಡಿಕೋಂಡು
ಸಂಪೂರ್ಣ ಹರ್ಷಗೊಂಡು
ಬಿಡೀ ಪ್ರಪಂಚವಂ.

Go to top