Verse 1

ಯೇಸು ಕ್ರಿಸ್ತ ನ್ಯಾಯ ತೀರ್ಪಿಗಾಗಿ
ಮೈಮೆಯಲ್ಲಿ ಬರಲು.
ಗದ್ದುಗೆಯ ಸ್ಥಾನಕೆದುರಾಗಿ
ನರರೆಲ್ಲ ನೆರೆದು
ನೋಡೊರಾಗ ತಮ್ಮ ಅರಸನ್ನ
ಆಗಲಾತ ತನ್ನ ಶಿಷ್ಯರನ್ನು
ಬೇರೆ ಮಾಡಿ ಸರ್ವರ
ನ್ಯಾಯತೀರ್ಪು ಮಾಡುವ.

Verse 2

ಕತ್ತಲಲ್ಲಿ ಆದ ದುರಾಚಾರ
ರಕ್ತದ್ರೋಹವೆಲ್ಲವು
ವ್ಯಭಿಚಾರ ದ್ವೇಷ ಅಹಂಕಾರ
ಸುಳ್ಳು ಮಾತು ಬೈಗಳು
ಹೃದದೊಳಗಿದ್ದ ಮೋಸ ಮಾಯ
ಮನಸ್ಸಾಕ್ಷಿಗಾದ ಪಾಪಗಾಯ
ಆಗ ಮರೆಯಾಗದೆ
ಎಲ್ಲ ಸ್ಪಷ್ಟ ಕಾಣುತೆ.

Verse 3

ಮತ್ತು ಯಾರು ತಮ್ಮ ಪಾಪಕಾಗಿ
ಅತ್ತು ದುಃಖ ಪಟ್ಟರೋ
ದುಷ್ಟ ಲೋಕದಲ್ಲಿ ಭಕ್ತರಾಗಿ
ಯಾರು ಸ್ಥಿರ ನಿಂತರೋ
ಅವರಾತ್ಮ ಶುದ್ಧಿ ಸತ್ಯ ನೀತಿ
ಉಪಕಾರ ಧರ್ಮ ದಯ ಪ್ರೀತಿ
ಸ್ಥಿರಭಕ್ತಿಮನಸು
ಆಗ ಎಲ್ಲ ಕಾಣ್ಬದು.

Verse 4

ಅಯ್ಯೋ ಮರೆ ಸೇರಿ ಕೊಳ್ಳೊದೆಲ್ಲಿ?
ಓಡಿ ಹೊಗ ಬಹುದೇ?
ಮುಚ್ಚುವಂಥ ಅಲಂಕಾರವೆಲ್ಲಿ?
ಕರ್ತ ನೆವ ಕೇಳೊನೇ?
ನನ್ನ ನೀತಿಯಲ್ಲಿ ಮೆಚ್ಚುತ್ತಾನೋ?
ಕರ್ಮ ಧರ್ಮವೇನು ಮಾಡಿದ್ದೇನೋ
ಅದೇ ಕರ್ತನೆದುರು
ತೀರ್ಪಿನಲ್ಲಿ ಕಾಣ್ಬುದು.

Verse 5

ಕರ್ತ ನೀನು ಎಚ್ಚರಿಸಲಾಗಿ
ಕೃಪಾವೇಳೆ ಕೊಡುತಿ.
ನಿನ್ನ ಶಬ್ಧ ಕೇಳುವವನಾಗಿ
ನಾನು ನಿನ್ನ ವರದಿ
ಸರ್ವ ಕೃತ್ಯ ನಿನ್ನ ಮಾನಕಾಗಿ
ಮಾಡುತ್ತೇನೆ ನಿನ್ನ ದಾಸನಾಗಿ
ಕಾದುಕೊಂಡು ಇರ್ವೆನು
ಕರ್ತ ಅಂಗೀಕರಿಸು.

Go to top