Verse 1

ಪಕ್ಕನೆ ಪಕ್ಕನೆ
ನೆನಸದ ಗಳಿಗೆ
ಮಿಂಚಿನ ಓಪಾದಿಯಲ್ಲಿ
ಶೋಭೆಯಾದ ಪ್ರಭೆಯಲ್ಲಿ
ಬರುತಾನೆ ಕರ್ತನು.

Verse 2

ಯಾವನು ಯಾವನು
ಧೈರ್ಯದಿಂದ ನಿಲ್ವನು?
ದುಷ್ಟರೆಲ್ಲ ಭೀತರಾಗಿ
ವಿಸ್ಮಯಕ್ಕೆ ಗುರಿಯಾಗಿ
ದಿಕ್ಕು ಕಾಣದ್ಹೋಗ್ವರು.

Verse 3

ಕ್ರೈಸ್ತನೇ ಕ್ರೈಸ್ತನೇ
ಯೇಸು ಕ್ರಿಸ್ತ ದಾಸನೇ
ಇರು ಮನಃಸ್ವಸ್ಥದಲ್ಲಿ
ಈ ಪ್ರಪಂಚಮರುಳಲ್ಲಿ
ಭ್ರಾಂತಿಗೊಳಗಾಗದೆ.

Verse 4

ಎಚ್ಚರ ಎಚ್ಚರ
ಕ್ರಿಸ್ತ ದಿನಕೋಸ್ಕರ
ಕರ್ತನನ್ನು ಎದುರ್ನೋಡು
ಓಟ ಎಡೆ ಬಿಡದೋಡು
ನಿನ್ನ ಆತ್ಮ ಕಾದುಕೊ.

Verse 5

ನಿದ್ರೆಯು ನಿದ್ರೆಯು
ಕಾಣುವಲ್ಲಿ ಶಿಕ್ಷೆಯು
ತಪ್ಪದು ಆ ದಿನದಲ್ಲಿ
ನೀನು ನಿದ್ರಾವಸ್ಧೆಯಲ್ಲಿ
ಪೂರ್ಣವಾಗಿ ಕೆಡುವಿ.

Verse 6

ನಂಬಿಕೆ ನಂಬಿಕೆ
ಬೇಕು ಯೇಸುದಾಸಗೆ.
ಎಕೋಭಾವ ಸೇವೆಯಲ್ಲಿ
ಇರಬೇಕು ಆಳಿನಲ್ಲಿ
ಧನಿ ಇಲ್ಲದಿದ್ದರೂ.

Verse 7

ಕರ್ತನೇ ಕರ್ತನೇ
ಬರಬೇಕು ಬೇಗನೇ
ಮಾಡಿಕೊಂಡು ನಿನ್ನ ಸೇವೆ
ನಿನ್ನ ದಾರಿ ನೋಡುತ್ತೇವೆ
ಪರಲೋಕದಿಂದ ಬಾ.

Go to top