Verse 1

ವಿನಾಶಕಾಲ ಹತ್ರವೇ
ಈ ನಮ್ಮ ಭೂಮಿಗೆ.
ಪೇಚಾಡಿನರಪುತ್ರರೇ
ಬಚಾವಿಗಾಗಿಯೆ.

Verse 2

ಕ್ರಿಸ್ತ್ಯೇಸು ಬಪ್ಪ ತೀರ್ಪಿಗೆ
ನೀನೆಲ್ಲಿ ಜಾರುವಿ?
ಪಾಪಾತ್ಮ ಆತನಕ್ಷಿಗೆ
ಇದ್ದಂತೆ ಕಾಣುವಿ.

Verse 3

ಆ ದಿನ ಬರೋ ವರೆಗೆ
ಅನೇಕ ಜನರು
ಇಚ್ಛಾನುಕೂಲ ಬೋಧೆಗೆ
ಮರ್ಳಾಗಿ ಬಾಳ್ವರು.

Verse 4

ಅಂಥವರೆಲ್ಲ ಪಕ್ಕನೆ
ಮೈಮರ್ತು ಬೀಳ್ವರು
ಸಹಾಯವೇನೂ ಕಾಣದೆ
ಕಂಗೆಟ್ಟು ಸಾಯ್ವರು.

Verse 5

ಶ್ರೀಯೇಸು ನಾ ನಿನ್ನೊಡವೆ
ನೀನೆನ್ನ ಒಡೆಯ
ಯುಗಾಂತಕಷ್ಟ ಒದಗೆ
ಕೊಡೆನಗೆದೆಯ.

Verse 6

ಸಂಕಷ್ಟ ತಾಳುವದಕ್ಕೂ
ನನ್ನಯ ಭಕ್ತಿಯ
ಚೆನ್ನಾಗಿ ಕಾಯುವದಕ್ಕೂ
ಕೊಡಾತ್ಮ ಶಕ್ತಿಯ.

Go to top