Verse 1

ಯಾತ್ರೆಕೂಟ ಹೋಗೋದೆಲ್ಲಿ
ಅದು ಯಾವ ವಿಧದಿ?
ಹೋಗುತ್ತೇವೆ ದಾರಿಯಲ್ಲಿ
ರಾಜಚಿತ್ತ ಲಕ್ಷಿಸಿ.
ತಗ್ಗು ದಿನ್ನೆ ಬೈಲು ಎಲ್ಲ
ದಾಟಿ ಯಾತ್ರಾಶ್ರಮವೆಲ್ಲ
ಹೋಗುತೆಂಬ ಧೈರ್ಯದಿ
ಹಾಡುತೇವೆ ಹೊಗಳಿ.

Verse 2

ಭಯ ಬೇಡ ಚಿಕ್ಕ ಮಂದೆ
ದಾರಿಯಲ್ಲಿ ಅಂಜಿಕೆ
ಯಾಕೆ? ನಮ್ಮ ಕೂಡ ತಂದೆ
ಇರುತ್ತಾನೆ ಕ್ರಿಸ್ತನೆ
ವೈರಿಯನ್ನು ಜೈಸಿದ್ದಾನೆ
ನಮ್ಮ ಮುಂದೆ ಹೋಗುತ್ತಾನೆ
ಆತನೆಮ್ಮನಲ್ಲಿಗೆ
ಮುಟ್ಟಿಸೋನು ಬೇಗನೆ.

Verse 3

ಯಾತ್ರಾಗಣದಾಶೆ ಏನು?
ಪರವನ್ನು ಮುಟ್ಟೊದು
ಇಹಭೋಗವೆಮಗೇನು?
ಮುಡಿ ಮುಡಿಯುಡುಪು
ಯೇಸು ಅಲ್ಲಿ ಕೊಡುತ್ತಾನೆ
ನಿತ್ಯರಾಜ್ಯ ಹೊಂದಿದ್ದಾನೆ
ಜೀವಾಹಾರ ಕೊಡುತಾ
ಇದ್ಧಾನೆಮ್ಮ ಹತ್ತರ.

Verse 4

ನಿಮ್ಮ ಯಾತ್ರೆಕೂಟದಲ್ಲಿ
ನಾವು ಸೇರ ಬರೋಣೋ?
ಬನ್ನಿ ಇಷ್ಟ ಗುಂಪಿನಲ್ಲಿ
ಹೋಗೋದೊಳ್ಳೇದಲ್ಲವೋ?
ಯೇಸು ಕಾಯುತಾನೆ ಅಲ್ಲಿ
ಶುದ್ಧವಾದ ದೇಶದಲ್ಲಿ
ಸೇರಿಸೋನು ಹರ್ಷದಿ
ಬನ್ನಿ ಬೇಗ ಬನ್ನಿರಿ.

Go to top