Verse 1

ಇಹಶೋಕ ಹಿಂಸೆಗಂಚೋದೇನು?
ಘನಮಾಲೆಯಿಂದ ನನಗೇನು?
ನನ್ನ ಕರ್ತ ಮುಳ್ಳು ಮುಡಿದ.
ಶುದ್ಧ ಪುಣ್ಯಮೂರ್ತಿ ಕ್ರೂಜೆಯಲ್ಲಿ
ಪಾಪರೂಪನಾಗಿ ತೂಗಿದ್ದಲ್ಲಿ
ನಂಗೆ ಸುಖ ಬೇಡವಕಟ.

Verse 2

ಯೇಸು ನಾನು ಬಡ ದಾರಿಗಾರ
ನಿನ್ನ ಸತ್ಯ ಅಂಧಪರಿಹಾರ
ಪವಿತ್ರಾತ್ಮ ನಂಗೆ ನಾಯಕ
ನನ್ನ ಬಲ ನೀನೆ ನಾನಶಕ್ತ
ಕ್ಷೇಮ ಕಳಕೊಂಡೆ ನಿನ್ನ ರಕ್ತ
ಪಾಪರೋಗಕ್ಕೊಂದೇ ಔಷಧ.

Verse 3

ಹೆಚ್ಚಿಸಯ್ಯಾ ಸದ್ವಿಶ್ವಾಸವನ್ನು
ವರ್ಧಿಸೆನ್ನ ಪ್ರೀತಿಯಗ್ನಿಯನ್ನು
ಸಾಗಲಾರೆ ನಾನು ಅನ್ಯಥಾ
ಪ್ರೀತಿ ಸೇರ ಪ್ರೀತಿಯೊಂದೇ ದ್ವಾರ
ಪ್ರೀತಿ ಮಾತ್ರ ಇಹದಿಂದ ಪಾರ
ಗಾಣಿಸೋದು ಮೋಕ್ಷಕ್ಕೆನ್ನನ್ನ.

Verse 4

ಪ್ರಿಯ ಕರ್ತಾಪೂರ್ಣ ಪ್ರೇಮದಿಂದ
ನನ್ನನ್ನೆಳ್ದಿ ನಿನ್ನಲೈಕ್ಯ ಹೊಂದ
ಮೋಕ್ಷವಿನ್ನೂ ಎಷ್ಟೋ ದೂರವೆ
ನೀಡು ನಿನ್ನ ಕೃಪಾಹಸ್ತವನ್ನು
ತ್ರಾಹಿ ಶೋಕಗ್ರಸ್ತ ದಾಸನನ್ನು
ಈಯು ತ್ರಾಣವೆನ್ನ ಪಾದಕೆ.

Verse 5

ಜೀವಯಾತ್ರೆಯಲ್ಲಿ ನಾನು ಸೋಲೆ
ಎಬ್ಬಿಸೆನ್ನ ದೃಷ್ಟಿಯನ್ನು ಮೇಲೆ
ರಮ್ಯವಾದ ಊರ್ಧ್ವಲೊಕಕೆ
ಹುಟ್ಟಿಸಿಂತು ಹೃತ್ಸಂತೋಷವನ್ನು
ಶುದ್ಧ ದಿವ್ಯ ಭಕ್ತಿಭಾವವನ್ನು
ಕಣ್ಣನೀರ ತಗ್ಗು ದಾಟಲೆ.

Verse 6

ನಿನ್ನ ಕ್ರೂಜೆ ನನ್ನ ಆತ್ಮಶರ್ಮ
ಕ್ರೂಜೆ ಹೊರೋದೆನ್ನ ಯಾತ್ರಾ ಧರ್ಮ
ಇಲ್ಲಿ ನಾನು ಪರದೇಶಿಯು.
ನಿನ್ನ ನಂಬಿ ಯಾತ್ರೇ ಕಷ್ಟವನು
ತಾಳಿ ತೀರಿಸಿದ ಭಕ್ತನನ್ನು
ಅಲ್ಲಿ ತಂದೇ ಮನೆಗಾಣಿಸು.

Go to top