Verse 1

ಪರಿಶುದ್ಧ ಆತ್ಮನೆ
ಯಾತ್ರೆಗಾರನೊಂದಿಗೆ
ಇದ್ದು ಹಸ್ತದಿಂದಲೆ
ನಡಿಸೆನ್ನ ಗುರಿಗೆ.
ಕಾಡಿನಲ್ಲಿ ಪಯಣ
ಮಾಡುವಾಗ ಧೈರ್ಯವ
ಕೊಡುತಾನೆ ಯೇಸುವು
ಎಂಬ ವಾಣಿ ಕೇಳಿಸು.

Verse 2

ಸತ್ಯಮಿತ್ರ ಸರ್ವತ್ರ
ಕುಂದು ಕಲೆ ಸರ್ವದಾ
ನೀನೇ ಪರಿಹರಿಸು
ಭಯ ಶಂಕೆ ಒಡಿಸು.
ಮಾರ್ಗವನ್ನು ಕುರ್ಡನು
ತಡವ್ಯಾಡಿ ನೋಡಲು
ಇರುತಾನೆ ಯೇಸುವು
ಎಂಬ ವಾಣಿ ಕೇಳಿಸು.

Verse 3

ಯೇಸು ಹತ್ರವಿರಲು
ಹಗಲಲ್ಲಿ ಸೂರ್ಯನು
ರಾತ್ರಿಯಲ್ಲಿ ಚಂದ್ರನು
ನಾವೆಯಲ್ಲಿ ಜಲವು
ದಾರಿಯಲ್ಲಿ ದುಷ್ಟರು
ಕಾಡಿನಲ್ಲಿ ಮೃಗವು
ಕಡಲಲ್ಲಿ ಗಾಳಿಯು
ಕೇಡು ಮಾಡಲಾರವು.

Verse 4

ಕಾಯುತಾನೆ ದೇವರು
ಬಲಗಡೆ ನೆರಳು
ಆಗಿರೋನು ಆತನೇ.
ಹೀಗಿರೋಣ ಚಿಂತೆಯೇ?
ಪ್ರಾಣ ಕಾಯೊ ನಾಥನೆ
ಪೋಷ ಬಪ್ಪ ಗತಿಗೆ
ಸಾಗಿಸೋನು ನೆಟ್ಟಗೆ
ಇಂದಿನಿಂದ ನಿತ್ಯಕೆ.

Verse 5

ಶ್ರಮಕಾಲ ತೀರಲು
ತೀರದಂಥ ಸುಖವು
ಪರಲೋಕಗ್ರಂಥದಿ
ನಾಮಧೇಯ ಸಿಕ್ಕಲಿ.
ಯೇಸುಕ್ರಿಸ್ತ ನಾಮವೆ
ಏಕ ಗತಿ ನನಗೆ
ಆದರಿಂದ ಯಾತ್ರಿಕ
ಪರಲೋಕ ಸೇರುವ.

Go to top