Verse 1

ನಾನು ಯೇಸು ಶಿಷ್ಯನೆ
ನನಗ್ಯಾಕೆ ಚಿಂತನೆ?
ನಿನ್ನ ಮನೆ ಬಿಟ್ಟು ಹೋಗು
ನಾನು ತೋರ್ಪ ಸ್ಥಾನಕ್ಹೋಗು
ಎಂತ ಯೇಸು ಹೇಳಲು
ಯಾಕೆ ಬೇರೆ ಹಂಬಲು?

Verse 2

ಯೇಸು ಆಜ್ಞೆಯಂತೆಯೇ
ನಡಕೊಳ್ಳು ಮನವೇ
ಅತ್ತಲಿತ್ತ ನೋಡಲುಂಟೇ?
ಕತ್ತಲಲ್ಲಿ ಅಳೋದುಂಟೇ?
ಜೊತೆಗಾರನಾತನು
ಸುತ್ತಮುತ್ತ ಕಾಪನು.

Verse 3

ನೀನು ಪೋಪ ಮಾರ್ಗವು
ಓರೆಕೋರೆ ಕಾಣಲು
ಕಾಲು ಜಾರಿ ದೊಡ್ಡ ಗಾಯ
ಆಗುವಲ್ಲಿ ಮದ್ದು ಮಾಯ
ಮಾಡೋನಾತ ನಿನಗೆ
ಅಂಜಬೇಡ ಶಿಷ್ಯನೆ.

Verse 4

ಲೋಕಯಾತ್ರೆ ತೀರಲು
ಶೋಕಕೆಲ್ಲ ಅಂತ್ಯವು
ತೀರದಂಥ ಸುಖ ತ್ರಾಣ
ಸ್ಥಿರವಾದ ಠಾಣ್ಯ ಸ್ಥಾನ
ತಂದೆ ಮಗ ಆತ್ಮನು
ಒಲ್ಮೆಯಿಂದ ಈಯ್ವನು.

Go to top