Verse 1

ಸಮಾಧಾನಗೊಂಡು
ಇಂದು ಹೊರಡು
ಧೈರ್ಯ ಪಡಕೊಂಡು
ಪ್ರಿಯ ತೆರಳು
ದೇವರೆಮ್ಮ ತಂದೆ
ಹೋಗು ಶರಣ
ಆತ ತನ್ನ ಮಂದೆ
ಕಾಯುತ್ತಿರುವ.

Verse 2

ಚಿಂತೆ ಭಯ ಬಿಟ್ಟು
ಸಾಗು ಅಲ್ಲಿಗೆ
ಭರವಸವಿಟ್ಟು
ಕ್ರಿಸ್ತನಲ್ಲಿಯೆ
ತೊರೆ ತೆರೆ ಗಾಳಿ
ನಷ್ಟ ಮಾಡವು
ಆತನವನ್ನಾಳಿ
ನಿಲ್ಲಿಸುವನು.

Verse 3

ಯೇಸು ನಾಮದಲ್ಲಿ
ಯಾತ್ರೆಯಾಗಲಿ
ಗಾಡಿ ನಾವೆಯಲ್ಲಿ
ಆತ ಪ್ರೇಮದಿ
ವೈರಿವ್ಯಾಧಿಬಾಣ
ಗುರಿ ತಪ್ಪಿಸಿ
ಇಷ್ಟ ಸ್ಥಳ ಕಾಣ
ದಯಮಾಡಲಿ.

Go to top