Verse 1

ಲೋಕವನ್ನು ಕಾಯುವಂಥ
ಪ್ರೇಮವುಳ್ಳ ತಂದೆಯೇ
ಕ್ಷಾಮಕಷ್ಟದೊಳಗಿಂದ
ರಕ್ಷಿಸೆಮ್ಮ ಕರ್ತನೇ.
ಕರ್ತನೇ ಕರ್ತನೇ
ರಕ್ಷಿಸೆಮ್ಮ ಕರ್ತನೇ.

Verse 2

ಸುಗ್ಗಿಕಾಲ ತಪ್ಪದಂತೆ
ಮಾಡ್ವೆನೆಂದು ಹೇಳಿದ್ದೀ
ನೀನು ಕೊಟ್ಟ ಮತಿನಂತೆ
ಈಗ ನಮಗಾಗಲಿ.
ಕರ್ತನೇ ಕರ್ತನೇ
ರಕ್ಷಿಸೆಮ್ಮ ಕರ್ತನೇ.

Verse 3

ಭೂಮಿ ಬೆಂದುಹೋದದ್ದನ್ನೂ
ಅಂತರಿಕ್ಷ ಹಾಗೆಯೇ
ತಾಂಬ್ರದಂತೆ ಆದದ್ದನ್ನೂ
ನೋಡು ನಮ್ಮ ತಂದೆಯೇ.
ಕರ್ತನೇ ಕರ್ತನೇ
ರಕ್ಷಿಸೆಮ್ಮ ಕರ್ತನೇ.

Verse 4

ಘೋರಕಷ್ಟ ಈತಿಬಾಧೆ
ನಮ್ಮ ಮೇಲೆ ಬಿದ್ದವೆ.
ಕುಗ್ಗಿಹೋದ ನಮ್ಮ ಪ್ರಾಣ
ಎತ್ತಿ ಕಾಯಿ ಕರ್ತನೇ.
ಕರ್ತನೇ ಕರ್ತನೇ
ರಕ್ಷಿಸೆಮ್ಮ ಕರ್ತನೇ.

Verse 5

ಕ್ಷೀಣವಾದ ದನಕರು
ಮೇವು ನೀರು ಕಾಣದೆ
ಬಿದ್ದು ಮಡಿಯುವದನ್ನು
ನೋಡು ನಮ್ಮ ಕರ್ತನೇ.
ಕರ್ತನೇ ಕರ್ತನೇ
ರಕ್ಷಿಸೆಮ್ಮ ಕರ್ತನೇ.

Verse 6

ಸಣ್ಣ ಮೋಡದಿಂದ ಮಳೆ
ಮುಂಚೆ ಬಂದ ಮೇರೆಗೆ
ಈಗ ಕೂಡ ಒಳ್ಳೆ ಮಳೆ
ದಯಮಾಡು ಕರ್ತನೇ.
ಕರ್ತನೇ ಕರ್ತನೇ
ರಕ್ಷಿಸೆಮ್ಮ ಕರ್ತನೇ.

Verse 7

ನಮ್ಮ ದ್ರೋಹವೆಲ್ಲವನ್ನು
ಕ್ಷಮೆ ಮಾಡು ಕರ್ತನೇ.
ದಯವುಳ್ಳ ತಂದೆ ಇಂದು
ಕೇಳು ನಮ್ಮ ಪ್ರಾರ್ಥನೆ.
ಕರ್ತನೇ ಕರ್ತನೇ
ರಕ್ಷಿಸೆಮ್ಮ ಕರ್ತನೇ.

Go to top