Verse 1

ಸ್ವಂತ ಜನ ಕಾಯ್ವ ಯೇಸು
ಈಗ ಇಲ್ಲಿ ಬಂದಿರು.
ರೋಗದಲ್ಲಿ ಬಿದ್ದ ನಿನ್ನ
ದಾಸನನ್ನು ದೃಷ್ಟಿಸು.
ದೃಷ್ಟಿಸು ದೃಷ್ಟಿಸು
ದಾಸನನ್ನು ದೃಷ್ಟಿಸು.

Verse 2

ಒಂದು ಮಾತಿನಿಂದ ವಾಸಿ
ಮಾಡಿದಂಥ ಕರ್ತನೇ
ಈತಗೊಂದು ವಾಕ್ಯ ಹೇಳಿ
ಕ್ಷೇಮ ಪಾಲಿಸ್ಯೇಸುವೇ.
ಯೇಸುವೇ ಯೆಸುವೇ
ಕ್ಷೇಮ ಪಾಲಿಸ್ಯೇಸುವೇ.

Verse 3

ಸೌಖ್ಯಕಾಗಿ ಮದ್ದುಮಾಯ
ಮಾಡುವಲ್ಲಿ ಯೇಸುವೇ
ನಿನ್ನ ಆಶೀರ್ವಾದ ಕೊಟ್ಟು
ವಾಸಿಮಾಡು ಕರ್ತನೇ.
ಕರ್ತನೇ ಕರ್ತನೇ
ವಾಸಿಮಾಡು ಕರ್ತನೇ.

Verse 4

ನಿನ್ನ ದಾಸ ನಿನ್ನ ಮೇಲೆ
ಭರವಸವಿಡಲಿ
ತಾಳುವಂತೆ ನಿನ್ನ ಕೃಪೆ
ಈತನಲ್ಲಿ ಹೆಚ್ಚಲಿ.
ಹೆಚ್ಚಲಿ ಹೆಚ್ಚಲಿ
ಈತನಲಿ ಹೆಚ್ಚಲಿ.

Verse 5

ಕಷ್ಟ ನಿಜಹಿತವನ್ನು
ಉಂಟುಮಾಡುತೆಮಗೆ.
ಕಷ್ಟಹೀನ ಲೋಕ ನೋಡಿ
ಕೋರುಮಾಡು ತಂದೆಯೇ.
ತಂದೆಯೇ ತಂದೆಯೇ
ಕೋರುಮಾಡು ತಂದೆಯೇ.

Go to top