Verse 1

ಎಲ್ಲ ಜೀವ ಕಾಯುವಂಥ
ಕೃಪಾಮೂಲ ಕರ್ತನೇ
ನಮ್ಮ ಮೊರೆಯನ್ನು ಈಗ
ಕೇಳು ದಿವ್ಯ ತಂದೆಯೆ.
ಈಗಲೇ ಈಗಲೇ
ಕೇಳು ದಿವ್ಯ ತಂದೆಯೇ.

Verse 2

ಜಾಡ್ಯ ಬಂದು ಎಲ್ಲ ಕಡೆ
ಸಾವಿರಾರು ಕೊಂದದೆ.
ಅದು ಹತ್ರ ಬಾರದಂತೆ
ತಡೆ ಮಾಡು ತಂದೆಯೆ.
ಈಗಲೇ ಈಗಲೇ
ಕೇಳು ದಿವ್ಯ ತಂದೆಯೇ.

Verse 3

ಶತ್ರುಗಳ ದಂಡು ಸುತ್ತ
ನಮ್ಮ ಮೇಲೆ ಬಂದಿದೆ
ನಿನ್ನ ದಿವ್ಯ ತ್ರಾಣದಿಂದ
ತಪ್ಪಿಸೆಮ್ಮ ತಂದೆಯೆ.
ಈಗಲೇ ಈಗಲೇ
ಕೇಳು ದಿವ್ಯ ತಂದೆಯೇ.

Verse 4

ಘೋರವಾದ ತೆರೆ ಎದ್ದು
ಮುತ್ತಿಕೊಂಡು ಬಂದದೆ
ನಮಗೀಗ ನಿನ್ನ ಹಸ್ತ
ಕೊಟ್ಟು ಎತ್ತು ತಂದೆಯೆ.
ಈಗಲೇ ಈಗಲೇ
ಕೇಳು ದಿವ್ಯ ತಂದೆಯೇ.

Verse 5

ದಿಕ್ಕುದೆಸೆ ತೋಚೋದಿಲ್ಲ
ಸುತ್ತು ಮೋಡ ಮುಚ್ಚಿದೆ
ಅಂಧಕಾರದಲ್ಲಿ ಮಾರ್ಗ
ತೋರಮಾಡು ತಂದೆಯೆ.
ಈಗಲೇ ಈಗಲೇ
ಕೇಳು ದಿವ್ಯ ತಂದೆಯೇ.

Verse 6

ನಮ್ಮ ದ್ರೋಹವನ್ನು ನೀನು
ಜ್ಞಪ್ತಿ ಮಾಡಿಕೊಳ್ಳದೆ
ಕೃಪೆಯಿಂದ ಕ್ಷಮೆ ಕೊಟ್ಟು
ರಕ್ಷಿಸೆಮ್ಮ ತಂದೆಯೆ.
ಈಗಲೇ ಈಗಲೇ
ಕೇಳು ದಿವ್ಯ ತಂದೆಯೇ.

Verse 7

ಕಷ್ಟ ತಾಳಲೇ ಬೇಕೆಂದು
ನಿನ್ನ ಚೆತ್ತವಾದರೆ
ತಾಳ ತಕ್ಕ ತ್ರಾಣವನ್ನು
ಕೊಡು ನಮ್ಮ ತಂದೆಯೆ.
ಈಗಲೇ ಈಗಲೇ
ಕೇಳು ದಿವ್ಯ ತಂದೆಯೇ.

Verse 8

ಶ್ರಮೆಯಿಂದ ನಮ್ಮ ಆತ್ಮ
ಹೆಚ್ಚು ಶುದ್ಧಿ ಹೊಂದುತೆ
ನಿನ್ನ ಚಿತ್ತಕನುಕೂಲ
ಮನ ಕೊಡು ತಂದೆಯೆ.
ಈಗಲೇ ಈಗಲೇ
ಕೇಳು ದಿವ್ಯ ತಂದೆಯೇ.

Go to top