Verse 1

ಭೂಪರಲೋಕ ಪ್ರಭುವೇ
ಅನಾದಿ ನೀತಿಸೂರ್ಯನೇ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 2

ನಮ್ಮೆಲ್ಲರನ್ನು ಸೃಷ್ಟಿಸಿ
ದೇಹಾತ್ಮವನ್ನು ಕಾಯುತ್ತಿ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 3

ಸತ್ಸೇವೆ ಮಾಡುವದಕೆ
ಸಹಾಯವಿಯ್ವ ದೇವರೇ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 4

ಈ ಮನೆಯನ್ನು ಕಟ್ಟಲು
ನಿನ್ನಿಂದ ಆಶೆ ಹುಟ್ಟಿತು
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 5

ಕೈ ಹಚ್ಚಿದಂಥ ಕಾರ್ಯವ
ಪೂರೈಸ ಕೊಟ್ಟಿ ಶಕ್ತಿಯ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 6

ಈ ಮನೆಯೊಳು ನಿತ್ಯವು
ನೀನಿದ್ದು ಆಶೀರ್ವದಿಸು
ಅನಂತ ಸ್ತೋತ್ರ ನಿನಗೆ
ದಯಾಳುವೇ.

Verse 7

ಪಿತಾಪುತ್ರಾತ್ಮ ದೇವರೇ
ಸಮಸ್ತ ಸೃಷ್ಟಿಯಿಂದಲೇ
ಅನಂತ ಸ್ತೋತ್ರ ನಿನಗೆ
ದಯಾಳುವೇ.

Go to top