Verse 1

ಶುದ್ಧ ಶುದ್ಧ ಪರಿಶುದ್ಧ
ಯೆಹೋವದೇವ ಪೂರ್ಣ ಶುದ್ಧ
ಎಂದ್ಹಾಡುತ್ತಾರೆ ದೂತರು.
ಇಲ್ಲಿ ನಾವು ಏಕವಾಗಿ
ಈ ನಿನ್ನ ಸ್ಥಾನಕೆದುರಾಗಿ
ಕೊಂಡಾಡುತ್ತೇವೆ ನಿನ್ನನು.
ಸದ್ಭಕ್ತ ಸಂಘದಿ ಸದ್ಭಕ್ತೀಭಾವದಿ
ಹಾಡುತ್ತೇವೆ
ಪವಿತ್ರನೇ
ಪವಿತ್ರನೇ
ಪವಿತ್ರ ಸದಾಸ್ವಾಮಿಯೇ.

Verse 2

ನಿನ್ನ ವಾಕ್ಯಬೋಧಕಾಗಿ
ಆರಾಧಿಸುವ ಸಭೆಗಾಗಿ
ಈ ಕಟ್ಟಡದ ಕಾರ್ಯವ
ಮಾಡಲಿಕ್ಕೆ ಬೇಕಾದ್ದನ್ನು
ಕೊಟ್ಟಂಥ ದಿವ್ಯ ದಯವನ್ನು
ನಾವಿಂದು ನೆಪ್ಪು ಮಾಡುತ
ಮಹೋಪಕಾರಿಯೇ
ನಿರ್ಲಯ ಸ್ವಾಮಿಯೇ
ಪರಮಾತ್ಮ
ನೀ ಲಾಲಿಸು
ಐ ಪಾಲಿಸು
ಎಂದ್ಹಾಡಿ ಬೇಡಿಕೊಂಬೆವು.

Verse 3

ನಿನ್ನ ವಾಸ ದಿವದಲ್ಲಿ
ಸಂಪೂರ್ಣವಾದ ಕಾಂತಿಯಲ್ಲಿ
ಮಿಂಚೋದು ಸರ್ವ ಕಾಲಕೆ.
ವಿಶ್ವದಲ್ಲಿ ಯಾವ ಬೀಡು
ಅದಕ್ಕೆ ಕಾಣಬಹುದೀಡು?
ಅನಾದಿ ಪ್ರೇಮಮೂರ್ತಿಯೆ
ಅನಾಥಬಂಧುವೇ
ಅನಂತ ಶಕ್ತನೇ
ಸ್ತುತಿಸ್ತೋತ್ರ
ಅಜಿತನೇ
ಅಮಿತನೇ
ಸದಾ ಕಟಾಕ್ಷಪೂರನೇ.

Verse 4

ನಿನ್ನ ಶತ್ರುಸೇವೆಗಾಗಿ
ಅಬದ್ಧ ದೇವ ಕೀರ್ತಿಗಾಗಿ
ಊರೆಲ್ಲ ಗುಡಿ ತುಂಬಿವೆ.
ನಿನ್ನ ಸತ್ಯ ಸೇವೆಗಾಗಿ
ಪವಿತ್ರ ನಿನ್ನ ನಾಮಕಾಗಿ
ಆಲಯವೆಲ್ಲಿ ಕಾಣುತೆ?
ಇಲ್ಲೊಂದು ಮಂದಿರ
ನೀ ನಿತ್ಯ ಬಂದಿರ
ಕಟ್ಟಿದ್ದೇವೆ
ನೀನೊಲೀದು
ಸ್ವೀಕರಿಸು
ಇದಿನ್ನು ನಿನ್ನ ಮನೆಯು.

Go to top