Verse 1

ಕರ್ತಾ ನಿನ್ನ ಮಕ್ಕಳನ್ನು
ಕಟಾಕ್ಷಿಸಿ ಈ ಮನೆಯನ್ನು
ನೀ ದಯಪಾಲಿಸಿರುತ್ತೀ.
ನಾವು ಈಗ ಅದರಲ್ಲಿ
ಪ್ರವೇಶವಾಗ ಕೃಪೆಯಲ್ಲಿ
ನೀನೊಳ್ಳೆ ಮಾರ್ಗ ಮಾಡಿದ್ದೀ.
ಈ ಉಪಕಾರವ
ನಾವಿಂದು ಸ್ಮರಿಸ
ಋಣಸ್ಥರು
ಶ್ರೀನಾಮದಿ
ಈ ಗೃಹದಿ
ಸೇರೋಣ ಹೃತ್ಸಂತೋಷದಿ.

Verse 2

ನಾವು ನಿನ್ನಾಧೀನದಲ್ಲಿ
ನಮ್ಮನುದಿನ ಕಾರ್ಯದಲ್ಲಿ
ನಿನ್ನಷ್ಟ ಆಜ್ಞೇ ಮೇರೆಗೆ
ಮಾಡಬೇಕು ನಿನ್ನ ಸೇವೆ
ವಿನಯದಿಂದ ಬೇಡುತೇವೆ
ನೀನೆಮ್ಮ ಮನೆಯೊಳಗೆ
ಸರ್ವಾಧಿಕಾರವ
ಮಾಡ್ ಆಗು ಮನೆಯ
ಯಜಮಾನ
ನೀನಾಳ ಬಾ
ನಮ್ಮರಸಾ
ಬಂದಿರು ನಮ್ಮ ಸಂಗಡ.

Verse 3

ಇನ್ನು ಮುಂದೆ ಮನೆಯನ್ನೂ
ನಿವಾಸಿಸುವ ಎಲ್ಲರನ್ನೂ
ಕಾಪಾಡಿ ಭದ್ರವಿರಿಸು.
ಹಿರಿಕಿರಿ ಮಕ್ಕಳಿಂದ
ನಮ್ಮಿಷ್ಟ ತಂದೆತಾಯ್ಗಳಿಂದ
ರೋಗಾದಿ ದೋಷ ತಪ್ಪಿಸು.
ಅಭಯ ಕೊಡುತಿ
ನೀ ನಿತ್ಯ ಇರುತಿ
ದುರ್ಗಸ್ಥಾನ
ಕೃಪಾಪೂರ್ಣ
ನಿನ್ನಾಶ್ರಯ
ಆಗಿರಲೆಮ್ಮ ಆಲಯ.

Verse 4

ಯೇಸುರಕ್ತ ಬಾಗಲಲ್ಲಿ
ಗುರ್ತಾಗಿ ಇದ್ದ ಪಕ್ಷದಲ್ಲಿ
ಮಂತ್ರಾದಿ ಮಾಟ ನಾಟದು
ಕ್ರಿಸ್ತಭಕ್ತ ಬೇಡುವಲ್ಲಿ
ಇದ್ಧಾನೆ ಯೇಸು ಮನೆಯಲ್ಲಿ
ಭೂತಾದಿ ಸೇರ ಕೂಡದು.
ಅಶುಭ ಜೈಸಲೆ
ಕಲ್ಯಾಣ ಮಾಡಲಿ
ಯೇಸುನಾಮ
ನೀನಿದ್ದರೆ
ನಾನದರೆ
ವಿನಾಶಕೆಂದು ಹೆದರೆ.

Verse 5

ಪ್ರಾರ್ಥನೆ ಈ ಮನೆಯಲ್ಲಿ
ನಿಂತ್ಹೋಗದಿದ್ದು ನಿತ್ಯದಲ್ಲಿ
ಮೇಲಾದ ಸ್ಥಾನಕೇರಲಿ.
ಪ್ರೀತಿ ತಾಳ್ಮೆ ಸಮಾಧಾನ
ಇತ್ಯಾದಿಗೆಲ್ಲ ಮೂಲಸ್ಥಾನ
ವಾಗಿರೋ ಬಕ್ತಿ ಕೂಡಲಿ.
ಇದೊಳ್ಳೆ ತೈಲವು
ಹೀಗಾಗೊದೆಲ್ಲವು
ಅಭಿಷೇಕ
ಸತ್ ಪ್ರಾರ್ಥನೆ
ಸುವಾಸನೆ
ಎಂಬಂತೆ ಹಬ್ಬಲೊಳಗೆ.

Go to top