Verse 1

ಕರ್ತ ನಿನ್ನ ಮಾನಕ್ಕಾಗಿ
ಪವಿತ್ರನಾಮಕಿರ್ತಿಗಾಗಿ
ಈ ಮನೆ ಉಂಟಾಯ್ತಲ್ಲವೋ?
ನಮ್ಮಲೀಗ ಸೇರ ಬಂದು
ನಿನ್ನಾಶೀರ್ವಾದ ವರ ತಂದು
ಸ್ವೀಕಾರವನ್ನು ಮಾಡಿಕೋ.
ಈ ಸಭಾಮಧ್ಯದಿ
ಸದಾ ನಿಂಗಿರಲಿ
ವಾಸಸ್ಥಾನ
ಹೀಗೆಮ್ಮೊಳು
ನೀನಿರಲು
ಇಲ್ಲುಂಟು ಸ್ವರ್ಗದ್ವಾರವು.

Verse 2

ಇಲ್ಲಿ ವಾರ ವಾರಕಾಗಿ
ಸ್ವಕೀಯ ನಿನ್ನ ಪ್ರಜೆಯಾಗಿ
ಈ ಸಭೆ ಕೂಡಿ ಬರಲು
ನೀನೂ ಬಂದು ಮಧ್ಯದಲ್ಲಿ
ನಿನ್ನಾತ್ಮ ಕೊಟ್ಟು ಹೃದದಲ್ಲಿ
ಈ ಸಭೆಯನ್ನು ವ್ಯಾಪಿಸು
ಒಂದೊಂದು ಹೃದಯ
ಪವಿತ್ರ ಆಲಯ
ಯೇಸು ಕ್ರಿಸ್ತ
ನಿಂಗಾಗಲಿ
ನೀ ದಯದಿ
ನಿವಾಸಿಸಿನ್ನು ಹೃದದಿ.

Verse 3

ಮತ್ತು ನಮ್ಮ ಸಭೆಯಲ್ಲಿ
ಪ್ರತ್ಯೊಂದು ಕ್ರೈಸ್ತಮನೆಯಲ್ಲಿ
ಸುಗಂಧಧೂಪ ಏರಲಿ
ದೀಪ ದಿವ್ಯ ತೈಲದಿಂದ
ಪವಿತ್ರ ದೀಪಸ್ತಂಭದಿಂದ
ಚೆನ್ನಾಗಿ ಉರ್ಯುತಿರಲಿ
ಒಂದೊಂದು ಗೃಹದಿ
ಗೃಹಸ್ಥನೀಡಲಿ
ಧೂಪ ಪೀಠ
ನಮ್ಮೊಳಗೆ
ನಿಂತ್ಹೋಗದೆ
ನಿಂಗೇರ ಬೇಕು ಪ್ರಾರ್ಥನೆ.

Go to top