Verse 1

ಹೋರಾಡಲಿಕ್ಕೆ ಬಂದೆವು
ನಮ್ಮಿಶನಾಮದಲ್ಲಿ
ವೈರಾಳುಗುಂಪಿಗೆದುರು
ಹೋಗೋಣ ಧೈರ್ಯದಲ್ಲಿ
ಸದಾ ಹೋರುತಾ
ಯತ್ನ ಮಾಡುತಾ
ದೃಢ ನಂಬಿಕೆ
ಸುಶಾಂತಿ ಪ್ರಾರ್ಥನೆ
ಇವಾಗಿವೆಮ್ಮ ಶಸ್ತ್ರ.

Verse 2

ಸೈತಾನದುರ್ಗ ದೊಡ್ಡದು
ಈ ಹಿಂದುಸ್ಥಾನದಲ್ಲಿ.
ಹ್ಯಾಗಾದಿತೆಮ್ಮ ವಶವು?
ಗೆದ್ದೇವೊ ಯುದ್ಧದಲ್ಲಿ
ಸದಾಶೂರನು
ಸೈನ್ಯಾಧೀಶನು
ಆದ ಕ್ರಿಸ್ತನು
ನಮ್ಮಲ್ಲಿ ಬಂದನು.
ಇನ್ನಾಗದಪಜಯ.

Verse 3

ಉಂಟೀಗ ದೊಡ್ಡ ಯುದ್ಧವು
ಸಮಸ್ತ ಕಡೆಯಲ್ಲಿ.
ಬಂದಿರುತ್ತಾನೆ ಶತ್ರುವು
ಉದ್ರೇಕದುರಿಯಲ್ಲಿ
ಕುಯುಕ್ತೀಶನು
ಮಹಾ ಕ್ರೂರನು
ನಮ್ಮನೆಲ್ಲರ
ಈ ಲೋಕದೊಡೆಯ
ಕೊಂದ್ಹಾಕ ಬಂದಿದ್ದಾನೆ.

Verse 4

ಜನಾಂಗ ಘೋಷಿಸುತ್ತದೆ
ಸಮುದ್ರ ದಂದದಲ್ಲಿ.
ಸನ್ಮಾನ ಸಲ್ಲಿಸುತ್ತದೆ
ನಿರ್ಜೀವ ಮೂರ್ತಿಯಲ್ಲಿ.
ಇಂಥಾಸಕ್ತಿಯೂ
ಎಲ್ಲಾ ಭಕ್ತಿಯೂ
ನಿಷ್ಪ್ರಯೋಜಕ
ಸುಳ್ಳಾದ ದೇವರ
ನಂಬಿದ್ದು ಕೆಟ್ಟಿದ್ದಾರೆ.

Verse 5

ಆದಾಗ್ಯು ಸ್ಥಿರ ನಿಲ್ಲುವಾ
ಗುಬಾರ ಮಧ್ಯದಲ್ಲಿ
ಸುವಾರ್ತೆ ಇನ್ನು ಸಾರುವಾ
ಸಂತೋಷಧೈರ್ಯದಲ್ಲಿ.
ಪರಾಕ್ರಮದಿ
ಸರ್ವಾಯುಧದಿ
ಕಾದಾಡೋದಕೆ
ಹೋಗೋಣ ರಣಕೆ
ಕಡೇಲಿ ಗೆಲ್ಲುತೇವೆ.

Go to top