Verse 1

ವಿರೋಧವಾಗಿ ಎದ್ದರು
ನೂರರು ವೈರಿ ಜನರು
ನಾವೊಂದು ಚಿಕ್ಕ ಮಂದೆಯು
ಹೋರಾಡ ಶಕ್ತಿ ಸಾಲದು.
ಸಂಧೈರ್ಯಗೊಳ್ಳು ಮಂದೆಯೆ
ಇಮ್ಮಾನುವೇಲ್ ಇದ್ಧಾನೆ ಅಲ್ಲವೆ.

Verse 2

ನಮ್ಮೆಲ್ಲ ತ್ರಾಣ ವ್ಯರ್ಥವು
ಪ್ರಯತ್ನ ಫಲವಿಲ್ಲದ್ದು
ಈ ಮೂಢಭಕ್ತಿ ಪರ್ವತ
ಯಾವಾತ ಕಿತ್ತುಹಾಕುವ?
ಸಂಧೈರ್ಯಗೊಳ್ಳು ಮಂದೆಯೆ
ಇಮ್ಮಾನುವೇಲ್ ಇದ್ಧಾನೆ ಅಲ್ಲವೆ.

Verse 3

ಸುವಾರ್ತೆ ಕೇಳಲೊಲ್ಲರು
ಕರ್ತನ್ನ ಸೇರಿಕೊಳ್ಳರು.
ಬೋರ್ಗಲ್ಲಿನಂಥ ಹೃದಯ
ಯಾರೊಡೆದ್ಹಾಕಿ ಬಿಡುವ?
ಸಂಧೈರ್ಯಗೊಳ್ಳು ಮಂದೆಯೆ
ಇಮ್ಮಾನುವೇಲ್ ಇದ್ಧಾನೆ ಅಲ್ಲವೆ.

Verse 4

ಕುಯುಕ್ತಿ ಮೋಸತಂತ್ರದಿ
ಹೋರಾಡುವರಾ ಸೈನ್ಯದಿ
ಅದೆಮ್ಮ ಮೇಲೆ ಬಿದ್ದರೆ
ಕೆಟ್ಠೋದೇವಲ್ಲೊ ಬೇಗನೆ?
ಸಂಧೈರ್ಯಗೊಳ್ಳು ಮಂದೆಯೆ
ಇಮ್ಮಾನುವೇಲ್ ಇದ್ಧಾನೆ ಅಲ್ಲವೆ.

Verse 5

ನಾವಂತು ಅಂಜಲೊಲ್ಲೆವು
ನಮ್ಮಿಶನನ್ನು ಬಲ್ಲೆವು
ಇಮ್ಮಾನುವೇಲನಾತನು
ನಮ್ಮೊಡನೆ ಶ್ರೀದೇವರು.
ಸಂಧೈರ್ಯಗೊಳ್ಳು ಮಂದೆಯೆ
ಇಮ್ಮಾನುವೇಲ್ ಇದ್ಧಾನೆ ಅಲ್ಲವೆ.

Verse 6

ಈ ಪತಿಪಕ್ಷ ಹೋರುತ
ಸಂತೋಷವಾಗಿ ಗೆಲ್ಲುವ
ಶತ್ರುಂಗಳೆಷ್ಟೋ ಇದ್ದರೂ
ವಿಜಯ ತಪ್ಪದೆಂದಿಗೂ.
ಸಂಧೈರ್ಯಗೊಳ್ಳು ಮಂದೆಯೆ
ಇಮ್ಮಾನುವೇಲ್ ಇದ್ಧಾನೆ ಅಲ್ಲವೆ.

Verse 7

ಈ ದೊಡ್ಡ ಮೂರ್ತಿಸ್ಥಾನವು
ಸೈತಾನಬಲದುರ್ಗವು
ಇದೆಮ್ಮ ಕ್ರಿಸ್ತನಾಲಯ
ಇನ್ನಾಗೊದೊಂದು ಸಮಯ.
ಸಂಧೈರ್ಯಗೊಳ್ಳು ಮಂದೆಯೆ
ಇಮ್ಮಾನುವೇಲ್ ಇದ್ಧಾನೆ ಅಲ್ಲವೆ.

Verse 8

ಈ ಸೀಮೆಯಲ್ಲಿ ಯೇಸುವು
ಸಮ್ರಾಜನಾಗಿ ಆಳ್ವನು.
ಭೂಲೋಕರಾಜರೆಲ್ಲರು
ಸಾಷ್ಟಾಂಗವಡ್ಡ ಬೀಳ್ವರು.
ಸಂಧೈರ್ಯಗೊಳ್ಳು ಮಂದೆಯೆ
ಇಮ್ಮಾನುವೇಲ್ ಇದ್ಧಾನೆ ಅಲ್ಲವೆ.

Go to top