Verse 1

ಉಂಟಾಗಿದೊಂದು ಗರ್ಜನೆ
ಶಸ್ತ್ರಕ್ಕೆ ಶಸ್ತ್ರ ತಾಗುತೆ
ಆರ್ಭಟ ಬೊಬ್ಬೆ ಹತ್ತಲು
ವಿಶ್ವಾಸವೀರರೆದ್ದರು.
ಸುಶಾಂತಿ ಪಡು ಸಭೇಯೆ
ಯೆಹೋವನಕ್ಷಿ ಕಾಯುತಿರುತೆ.

Verse 2

ಸಹಸ್ರ ಮಂದಿ ನಮ್ಮನು
ನಿರ್ಮೂಲಿಸಲಿಕೆದ್ದರು
ಒತ್ತಾಯ ಸುಳ್ಳು ಕಪಟ
ನಮ್ಮೆದುರಾಳಿಯಾಯುಧ.
ಸುಶಾಂತಿ ಪಡು ಸಭೇಯೆ
ಯೆಹೋವನಕ್ಷಿ ಕಾಯುತಿರುತೆ.

Verse 3

ನಾವಂಜೆವೆಮ್ಮ ಕರ್ತನು
ಕ್ರೂಜೇಲಿ ಹೋರನಾಡಲು
ಸೈತಾನನಧಿಕಾರವ
ಸಂಪೂರ್ಣ ಮುರಿದ್ಹಾಕಿದ.
ಸುಶಾಂತಿ ಪಡು ಸಭೇಯೆ
ಯೆಹೋವನಕ್ಷಿ ಕಾಯುತಿರುತೆ.

Verse 4

ವಿಶ್ವಾಸ ನಮ್ಮ ಖೇಡ್ಯವು
ಸುವಾರ್ತೆ ನಮ್ಮ ಖಡ್ಗವು
ದೇವಾತ್ಮ ನೆರವಾಗಲು
ವಿರೋಧಿ ನಮ್ಮ ಜೈಸನು.
ಸುಶಾಂತಿ ಪಡು ಸಭೇಯೆ
ಯೆಹೋವನಕ್ಷಿ ಕಾಯುತಿರುತೆ.

Verse 5

ಪ್ರಮಾಣ ಮಾಡಿ ನಂಬಿಕೆ
ಇಟ್ಟೆಮ್ಮ ಯೇಸುನಾಥಗೆ
ಭೂಲೋಕವನ್ನು ಗೆದಿಯ
ನಾವೆಲ್ಲರೆದ್ದು ಹೋರುವ.
ಸುಶಾಂತಿ ಪಡು ಸಭೇಯೆ
ಯೆಹೋವನಕ್ಷಿ ಕಾಯುತಿರುತೆ.

Go to top