Verse 1

ಆಕಾಶವನ್ನು ಹರಕೊಂಡು
ಐ ತ್ವರೆಯಾಗಿ ಇಳ್ದು ಬಾ.
ಶೈಲಾದಿ ತತ್ತರಿಸಿಕೊಂಡು
ನಿಂಗಂಜಲಿ ಭೂಮಂಡಲ.
ಕಡ್ಗಿಚ್ಚು ಕಾಡು ಸುಡುವಂತೆ
ಪ್ರತಾಪವ ಪ್ರದರ್ಶಿಸಿ
ರಾಜಾಧಿರಾಜ ನಮ್ಮ ತಂದೆ
ರಾಜ್ಯಾರಿ ಸೋಲಿಸುಗ್ರದಿ.

Verse 2

ನಿನ್ನ ಪ್ರಭಾವ ತೇಜ ಶಕ್ತಿ
ಜನಾಂಗಕ್ಕೆಲ್ಲ ಕಾಣಲಿ.
ನಿಂಗರ್ಹವಾದ ಭಯಭಕ್ತಿ
ಸಮಸ್ತರಲ್ಲಿ ಹುಟ್ಟಲಿ.
ಮಾನುಷ ಕಣ್ಣು ಕಾಣದಂಥ
ಮಾನುಷ ಕಿವಿ ಕೇಳದ
ಮಾನುಷ ಬುದ್ಧ ಮಿರುವಂಥ
ವಿಮುಕ್ತಿ ಸಾಧಿಸೊಡೆಯ.

Verse 3

ನಿನ್ನಾಜ್ಞೆಯನ್ನು ಆದುಕೊಂಡು
ನಿನ್ನನ್ನು ಪ್ರೀತಿ ಮಾಡುವ
ಸ್ವಪ್ರಜೆಯಂ ಕಾಪಾಡಿಕೊಂಡು
ನಿನ್ನಾಪ್ತರಿಂಗೆ ಶಾಂತಿ ತಾ.
ನಮ್ಮನ್ನು ನೋಡಿ ದಯದಿಂದ
ಬಿಟ್ಟೆಲ್ಲ ಉಗ್ರಕೋಪವ
ಮಹಾಂತ ನಿನ್ನ ಪ್ರೀತಿಯಿಂದ
ಕಟಾಕ್ಷಿಸಿನ್ನು ಸಭೆಯ.

Go to top