Verse 1

ನಿನ್ನನ್ನು ಯೇಸು ಬಲ್ಲೆವು
ಎಂಧೇಳ ಹ್ಯಾಗೆ ಶಕ್ತರು?
ಪ್ರಪಂಚಕಿಂಬು ಕೊಟ್ಟದು
ಸುಜ್ಞಾನಕ್ಕಡ್ಡಿಯಾಯಿತು.
ನಿನ್ ಪ್ರೀತಿ ತ್ರಾಣ ಕರ್ತನೆ
ತೋರ್ಪಡಿಸಿನ್ನು ಸಭೆಗೆ.

Verse 2

ತಕ್ಕಂತೆ ಭಯ ಪಟ್ಟೆವು
ಎಂಧೇಳ ಹ್ಯಾಗೆ ಶಕ್ತರು?
ನಮ್ಮೆಲ್ಲ ಕೃತ್ಯ ಮನಸ್ಸು
ನೀ ಬಲ್ಲಿ ಎಂದು ಮರ್ತೆವು.
ಈ ಮಾತು ಕಲಿಸೆಮಗೆ
ನಿನ್ನಕ್ಷಿ ನಮ್ಮ ಮೇಲದೆ.

Verse 3

ತಕ್ಕಂತೆ ಪ್ರೀತಿಸಿದೆವು
ಎಂಧೇಳ ಹ್ಯಾಗೆ ಶಕ್ತರು?
ನಿನ್ನನ್ನು ಎಲ್ಲಕ್ಕಿಂತಲೂ
ಇನ್ನೊಬ್ಬನನ್ನೆಮ್ಮಂತೆಯೂ
ನಾವಿನ್ನು ಪ್ರೀತಿ ಮಾಡಲು
ನೀ ಕರ್ತಾ ನಮ್ಮ ಪ್ರೇರಿಸು.

Verse 4

ತಕ್ಕಂತೆ ಸೇವಿಸಿದೆವು
ಎಂಧೇಳ ಹ್ಯಾಗೆ ಶಕ್ತರು?
ಕರ್ತವ್ಯ ಚಿಂತೆ ಇಲ್ಲದೆ
ಆಸಕ್ತಿ ನಿಂತು ಹೋಗಿದೆ.
ನಮ್ಮನ್ನು ಯೋಗ್ಯ ಸೇವೆಗೆ
ನೀ ಬಲಪಡಿಸಾಳ್ಮನೆ.

Verse 5

ಶ್ರೀ ಯೇಸು ನಿನ್ನ ಜ್ಞಾನವ
ನಿಂಗಿದ್ದ ಭಯ ಪ್ರೀತಿಯ
ಸಂಪೂರ್ಣವಾಗಿ ಸ್ವರ್ಗದಿ
ಸಂಸೇವೆಗಾಗಿ ಕೊಡುವಿ.
ಕಣ್ಣಾರೆ ನಿನ್ನನೋಡಲು
ಈಗೆಮ್ಮ ಸಿದ್ಧ ಪಡಿಸು.

Go to top