Verse 1

ಮಧ್ಯ ಜೀವದೊಳಗೆ
ಮೃತಿಯಲ್ಲಿದ್ದೇವೆ.
ಎಲ್ಲಿ ಗತಿ? ಕೃಪೆಯ
ಎಲ್ಲಿ ಹೊಂದುತೇವೆ?
ನಿನ್ನೊಬ್ಬನಲ್ಲೆ ಕರ್ತ
ಅಸಹ್ಯ ನಮ್ಮ ಕರ್ಮವು
ನಿನ್ನ ಕೋಪವೇರ್ಸಿತು.
ನಿರ್ಮಲ ಕರ್ತನೇ
ನಿರ್ಮಲ ಶಕ್ತನೇ
ನಿರ್ಮಲ ದಯಾಪರನಾದ
ಸಂರಕ್ಷಕನೇ
ತೀಕ್ಷ್ಣ ಸಾವಿನಿಂದ
ನಮ್ಮ ಆತ್ಮ ತಪ್ಪಿಸು
ಕಟಾಕ್ಷವಿಟ್ಟು.

Verse 2

ಮಧ್ಯ ಮೃತಿಯೊಳಗೆ
ನರಕಾಗ್ನಿದ್ವಾರ
ತೆರೆದಾಗಲೆಮಗೆ
ಯಾರು ಹೊಣೆಗಾರ?
ನೀ ಮಾತ್ರ ನಮ್ಮ ಕರ್ತ
ನೀನೆಮ್ಮ ಕೇಡು ದೃಷ್ಟಿಸಿ
ರಕ್ಷಿಸನುಗ್ರಹದಿ.
ನಿರ್ಮಲ ಕರ್ತನೇ
ನಿರ್ಮಲ ಶಕ್ತನೇ
ನಿರ್ಮಲ ದಯಾಪರನಾದ
ಸಂರಕ್ಷಕನೇ
ಆಗ್ನಿ ಕುಂಡದಲ್ಲಿ
ದೊಬ್ಬ ಬೇಡ ನಮ್ಮನು
ಕಟಾಕ್ಷವಿಟ್ಟು.

Verse 3

ಮಧ್ಯ ನರಕಾಗ್ನಿಯ
ಶಿಕ್ಷಾ ಪರಿಮಾಣ
ನೋಡಿ ಭೀತಿಗೊಳ್ಳಲು
ನಮಗೆಲ್ಲಿ ಸ್ಥಾನ
ನಿನ್ನೊಬ್ಬನಲ್ಲೆ ಯೇಸು
ನೀ ನಿನ್ನ ರಕ್ತ ಚೆಲ್ಲದೆ
ಪಾಪಪರಿಹಾರಕೆ.
ನಿರ್ಮಲ ಕರ್ತನೇ
ನಿರ್ಮಲ ಶಕ್ತನೇ
ನಿರ್ಮಲ ದಯಾಪರನಾದ
ಸಂರಕ್ಷಕನೇ
ಹೀನ ಮಡ ಬೇಡ
ಭಕ್ತರ ಪ್ರತೀಕ್ಷೆಯಂ
ಕಟಾಕ್ಷವಿಟು.

Go to top