Verse 1

ಕ್ರಿಸ್ತ್ಯೇಸು ಸ್ವಾಮಿ ವಾಸಿಸೆಮ್ಮೊಳು
ಈ ಸಾಯಂಕಾಲ ಹತ್ರದಲ್ಲಿರು
ಕಾರ್ಗತ್ತಲೀಗ ಕವಿದಿರಲು
ನೀ ಮಿತ್ರ ಯೇಸು ವಾಸಿಸೆಮ್ಮೊಳು.

Verse 2

ಸಹಾಯಹೀನರಿಂಗೊತ್ತಾಸೆಯು
ಆಧಾರಹೀನರಿಂಗಾಧಾರವು
ಬಿದ್ದೋಗುವಾಗ ನೀನೇ ಪಾಲಿಸು
ನೀ ಬಂದು ಕರ್ತ ವಾಸಿಸೆಮ್ಮೊಳು.

Verse 3

ಜೀವಾಂತ್ಯಕಾಲ ತೀವ್ರ ಬರುತೆ
ಭೂಲೋಕ ಶೋಭೆ ಹರ್ಷ ಹೋಗುತೆ
ಎಲ್ಲೆಲ್ಲಿಯು ಮಾರ್ಪಾಟವಾದರು
ನೀನಿರೆ ಯೇಸು ಸಾಕು ನಿತ್ಯಕು.

Verse 4

ಅವಶ್ಯ ನಂಗೆ ನಿನ್ನ ಸಾಮಿಪ್ಯ
ನಿನ್ಹೊರ್ತು ಯಾರು ನನ್ನ ಆಸರ?
ನೀನಿದ್ದರೆನಗಿಲ್ಲ ಅಂಜಿಕೆ
ಕಟಾಕ್ಷವೆನ್ನ ದುರ್ಗವಾಗುತೆ.

Verse 5

ಸಂಕಷ್ಟವೆಲ್ಲ ಅಲ್ಪ ಮಾತ್ರವೆ
ಕ್ರಿಸ್ತ್ಯೇಸು ನೀ ನನ್ನೊಂದಿಗಿದ್ದರೆ
ನಾ ಮೃತಿಕೊಂಡಿಗಂಜದಿರುವೆ
ಪಾತಾಳಾಕಪಜಯವಾಗಿದೆ.

Verse 6

ಜೀವಾಂತ್ಯವೆಂಬ ಸಾಯಂಕಾಲವು
ಬಂದಾಗ ಕರ್ತ ನೀನೆ ದಾಟಿಸು
ಆ ಸ್ವರ್ಗ ಪ್ರಾತಃಕಾಲ ಮೂಡಲೆ
ಇಲ್ಲಿದ್ದ ಕತ್ತಲೆಲ್ಲ ಹೋಗುತೆ.

Go to top