Verse 1

ಕ್ರೀಸ್ತ್ಯೇಸು ನೀತಿಸೂರ್ಯನೆ
ಸಮಸ್ತ ಭಕ್ತ ಸಭೆಗೆ
ಆಕಾಶದಿಂ ಪ್ರಕಾಶಿಸಿ
ಪ್ರಕಾಶ ಉಂಟುಮಾಡುತಿ.

Verse 2

ನಮ್ಮತಿ ಪ್ರಿಯ ಕರ್ತನೆ
ಆಧಾರ ಕೊಡು ನಮಗೆ
ಸೈತಾನನಿಂದ ನಮ್ಮನ್ನು
ಕೃಪಾಳುವಾಗಿ ರಕ್ಷಿಸು.

Verse 3

ಪವಿತ್ರ ನಿನ್ನ ರಕ್ತವು
ನಮ್ಮನ್ನು ಶುದ್ಧ ಮಾಡೊದು
ಶರೀರ ನಿದ್ದೆ ಗೈಯಲು
ವಿಶ್ವಾಸ ಎಚ್ಚತ್ತಿಹುದು.

Verse 4

ನಮ್ಮನ್ನು ಕಾಯಿ ಕ್ರೀಸ್ತನೇ
ನೀನೆಮ್ಮ ಭದ್ರ ದುರ್ಗವೇ
ಮುಂಜಾನೆ ಎಚ್ಚರಾಗಲು
ನಿನ್ನನ್ನು ಸ್ತುತಿಸುವೆವು.

Go to top