Verse 1

ಸಂಧೋಯ್ತು ದಿನ ಬರ್ರಿ
ಹೋಗೋಣ ಭ್ರಾತ್ರರೆ
ಗಂಡಾಂತ್ರವುಂಟು ಸರಿ
ಈ ಕಾಡಿನೊಳಗೆ.
ಪಡೋಣ ಧೈರ್ಯವ
ವಿಶ್ವಾಸ ಯಾತ್ರೆಯನ್ನು
ಪೂರೈಸೊ ತ್ರಾಣವನ್ನು
ತಂದೀಯ್ವನೊಡೆಯ.

Verse 2

ಇಕ್ಕಟ್ಟು ಹಾದಿಯಲ್ಲಿ
ಪ್ರಯಾಸ ಪಟ್ಟರು
ಆ ಕರೆದಾತನಲ್ಲಿ
ವಿಶ್ವಾಸಿಸುವೆವು
ಯೆರೂಸಲೇಮಿಗೆ
ನಮ್ಮಾತ್ಮದೃಷ್ಟಿ ಇಟ್ಟು
ಈ ಕಾಡುಲೋಕ ಬಿಟ್ಟು
ಹೋಗೋಣ ಭ್ರಾತ್ರರೆ.

Verse 3

ಪ್ರಪಂಚದನುಭೋಗ
ಏನೇನು ನೋಡದೆ
ನಿರ್ವಿಘ್ನನಾಗಿ ಹೋಗ
ದೇಶಾಂತ್ರಿಕಟ್ಟಳೆ
ಅಭಯವಾಗಲಿ
ಪ್ರಪಂಚವನ್ನು ಬಿಟ್ಟು
ಬೈಲಾಶೆ ತೆಗೆದಿಟ್ಟು
ಆ ಗುರಿ ನೋಡಿರಿ.

Verse 4

ಬರ್ರೋ ಸಂತೋಷವಾಗಿ
ಕೈಕೊಟು ಹೋಗಿರಿ
ಯಾರೊಬ್ಬ ಬೀಳಲಾಗಿ
ಸಹಾಯ ಮಾಡಿರಿ
ಪ್ರಯಾಣ ಸಣ್ಣದು
ನಾಂ ನಾಳೆ ಸ್ವಾಸ್ತ್ಯದಲ್ಲಿ
ನಮ್ಮಪ್ಪ ಮನೆಯಲ್ಲಿ
ಪ್ರವೇಶಗೊಂಬೆವು.

Go to top