Verse 1

ಪ್ರಕಾಶಮಯ ಸೂರ್ಯನು
ಪೂರೈಸಿದ್ದಾನೆ ಯಾತ್ರ.
ಲೋಕಕ್ಕೆ ನಿದ್ರೆ ಹತ್ತಿತು.
ನನ್ನಾತ್ಮವೇ ನೀ ಮಾತ್ರ
ಎಚ್ಚತ್ತು ಸೇರ ಬಾ
ಕ್ರಿಸ್ತ್ಯೇಸುಪಾದವ
ಸರ್ವಸ್ವವಂ ಸಮರ್ಪಿಸಿ
ಸಂಗೀತ ಹಡುಲ್ಲಾಸದಿ.

Verse 2

ಸುವರ್ಣತಾರಾರಾಶಿಯು
ರಾತ್ರೀಲಿ ಹೊಳೆಯೋದು
ಸಹಸ್ರ ಪಾಲು ಕಾಂತಿಯು
ನನ್ನಾತ್ಮದಲ್ಲಿರೋದು.
ಆ ಸ್ವರ್ಗನಕ್ಷತ್ರ
ಶ್ರೀ ಯೇಸುತಾರಕ
ನನ್ನಂತಜ್ರ್ಯೋತಿ ಶರಣ
ನಿಕ್ಷೇಪ ಸಂತಸ.

Verse 3

ನರಾದಿ ಪ್ರಾಣಿ ಕೋಟಿಯು
ತೂಕಡಿಸಿರಲಾಗಿ
ಸಮಸ್ತ ಭಕ್ತಪಾಲನು
ಶ್ರೀ ಯೇಸು ಒಬ್ಬನಾಗಿ
ಇದ್ಧಾನೆ ಎಚ್ಚರ
ನನ್ನನ್ನು ನೋಡುತ್ತ.
ನಿನ್ನೊಡನೆನ್ನ ಮನಸ್ಸು
ಆತ್ಮಾಪ್ತ ಎಚ್ಚತ್ತಿರೋದು.

Verse 4

ನಿನ್ನೈಕ್ಯದಿ ನಾ ಮಲಗೆ
ಸುಭದ್ರನಾಗಿದ್ಧೇನೆ
ನಿನ್ನಲ್ಲಿ ನಿದ್ದೆ ಗೈದರೆ
ಸಾವೇನು? ಏಳುತ್ತೇನೆ.
ಶ್ರೀ ದೂತಕಾವಲು
ನನ್ನೊಂದಿಗಿರಲು
ಪಿಶಾಚಿಸೈನ್ಯಕ್ಕಂಜೆನು.
ನನ್ಯೇಸು ಕ್ರಿಸ್ತ ಸ್ವಾಸ್ತ್ಯವು.

Verse 5

ಕೂಸನ್ನು ಈಗ ಅಪ್ಪಿಕೋ
ಕ್ರಿಸ್ತ್ಯೆಸು ನಿದ್ರೆ ಬಂತು.
ತಪ್ಪಿರೆ ನಿನ್ನಿಂದಲ್ಲವೊ
ನನ್ನೆಲ್ಲ ಸಾಲ ಸಂತು
ಕಾರುಣ್ಯ ಹಾಸಿಗೆ
ಅಚ್ಛಾದ ಪ್ರೀತಿಯೇ
ನಿನ್ನಾತ್ಮವೀವ ಹರ್ಷವು
ನನೊಂದೇ ಸ್ವಪ್ನಧ್ಯನವು.

Verse 6

ಆಯಾಸಗೊಂಡ ದೇಹವೇ
ಮಲಗಿ ನಿದ್ರೆ ಮಾಡು
ಕಣ್ಮುಚ್ಚಿಕೊಂಡು ಮನವೇ
ಜಂಜಾಟವಂ ಬೀಸಾಡು
ಸುಶಾಂತಿ ಆಗಲಿ
ನೀ ಯೇಸು ಕಾಯುವಿ.
ಸ್ವಸ್ತ್ಯಸ್ತು ಅಂದ ನಿನಗೆ
ಹೃಜ್ಜಾತ ಸಂಧ್ಯಾವಂದನೆ.

Go to top