Verse 1

ದಿನಾಯಾಸ ಪಡಕೊಂಡ ಮೇಲೆ
ಸಾಯಂಕಾಲಶಾಂತಿ ಒಳ್ಳೇದು.
ಈಗ ಕಷ್ಟ ಪಡಕೊಳ್ಳೊ ವೇಳೆ
ಇದ್ದರೂ ಹೃತ್ಸಮಾಧಾನವು.
ಯೇಸುವಲ್ಲಿ ನನಗಾಯಿತು
ಪರದಲ್ಲಿ ಪರದಲ್ಲಿ
ನಿತ್ಯ ಶಾಂತಿಯು.

Verse 2

ಹೌದು ಅಲ್ಲಿ ನಿತ್ಯ ಸಮಾಧಾನ
ದೇವಜನರಿಂಗೆ ಇಟ್ಟಿದೆ.
ಲೋಕಯುದ್ಧದಲ್ಲಿ ಗೆದ್ದ ಮಾನ
ಅಲ್ಲಿ ಕರ್ತನಿಂದ ಸಿಕ್ಕುತೆ.
ಕ್ಷುಧೆದಾಹ ಮುಗಿದ್ಹೋಯಿತು
ಸುಖಭಾಗ್ಯ ಸುಖಭಾಗ್ಯ
ಎಂದು ತೀರದು.

Verse 3

ಸಮಾಧಾನ ಸ್ಥಳ ಪರಲೋಕ
ಕ್ರಿಸ್ತನಿರುವಲ್ಲಿ ಶಾಂತಿಯು.
ಅಲ್ಲಿ ನರಲೋಕದೆಲ್ಲ ಶೋಕ
ಪರಿಹಾರವಾಯ್ತು ನಿತ್ಯಕು.
ಪ್ರಿಯ ಕರ್ತ ಅಲ್ಲಿ ನನಗು
ನಿತ್ಯ ಶಾಂತಿ ನಿತ್ಯ ಶಾಂತಿ
ದಯೆ ಪಾಲಿಸು.

Go to top