Verse 1

ಅಪ್ಪಾ ತಂದೆ ವಂದನೆ
ಬಂದೆ ನಿನ್ನ ಪಾದಕೆ.
ಬಡ ಬಾಲ ಪ್ರಾರ್ಥನೆ
ಕೇಳು ಸ್ವಾಮಿ ದೇವರೆ.

Verse 2

ಉಪಕಾರರಾಶಿಯಂ
ಪರಿಪೂರ್ಣ ಪ್ರೀತಿಯಂ
ಮಾಡಿ ನನ್ನ ತಾಳಿದೆ
ಕರುಣಾಳು ತಂದೆಯೆ.

Verse 3

ಬಹು ಪಾಪ ಮಾಡಿದೆ
ನಿನ್ನ ಮಾತು ಕೇಳದೆ
ನೋಡಿ ಯೇಸುಮುಖವಂ
ಮಾಡು ಪರಿಹಾರವಂ.

Verse 4

ನನ್ನ ಮಿತ್ರಾಮಿತ್ರರಂ
ಸರ್ವ ಬಂಧುವರ್ಗವಂ
ಲೋಕ ಜನರೆಲ್ಲರಂ
ನೋಡಿ ನೀಡು ಕ್ಷೇಮವಂ.

Verse 5

ಚಿಂತೆ ದುಃಖದವರು
ಬೇನೆ ಬೇಸರವರು
ಕುಗ್ಗಿ ಮಡೋ ಪ್ರಾರ್ಥನೆ
ತಕ್ಕೊ ನಿನ್ನ ಮನಕ್ಕೆ.

Verse 6

ಬೇಗ ಸೊಂಪು ನಿದ್ದೆಯ
ಕೊಟ್ಟು ಇಂದು ರಾತ್ರಿಯ
ಕಾವಲಿಗೆ ದೂತರ
ಕಳುಹೆನ್ನ ಹತ್ತರ.

Verse 7

ಸಾಯುವಂಥ ಗಳಿಗೆ
ನೀನು ಕೊಂಡ ಆಳಿಗೆ
ಬೇನೆಬೇಸರಿಲ್ಲದೆ
ಮಾಡಿ ವೈಯಿ ಮೋಕ್ಷಕೆ.

Verse 8

ಸ್ತುತಿ ನಿನಗಾಗಲಿ
ಘನ ಮಾನ ಸಲ್ಲಲಿ
ನಿನ್ನ ತಿರು ನಾಮಕೆ
ಯೇಸು ಸರ್ವಕಾಲಕೆ.

Go to top