Verse 1

ಈ ದಿನ ಸಂದು ಹೋಯ್ತು
ನಾ ಹೃದ ಮೇಲಕ್ಕೊಯ್ದು
ಅಪ್ಪಾ ಕೊಂಡಾಡುವೆ.
ಪ್ರಸನ್ನ ಮುಖನಾಗಿ
ಕೂಸನ್ನ ನೋಡಲಾಗಿ
ನಾ ಬೆಳಕಾಗಿ ಉರ್ಯುವೆ.

Verse 2

ಈ ಸಾಯಂಕಾಲದಲ್ಲಿ
ವಾತ್ಸಲ್ಯಹಸ್ತದಲ್ಲಿ
ಎನ್ನಪ್ಪಿಕೊಂಡಿರು.
ನೀನಿರೆ ಅಂಧಕಾರ
ಹೀನೇಂದ್ರಿಯ ವ್ಯಾಪಾರ
ಇದೆಲ್ಲ ನಿಂತುಹೋಗೊದು.

Verse 3

ನೀನೆನ್ನ ಪ್ರೀತಿಸಿದ್ದು
ನನ್ನನ್ನು ಸುತ್ತುತ್ತಿದ್ದು
ಸ್ವೀಕಾರ ಮಾಡಿದ್ದೀ.
ಪವಿತ್ರ ತೇಜಮೂರ್ತಿ
ವಿಶ್ವಾಸಿ ಹರ್ಷಪೂರ್ತಿ
ವಿಶ್ರಾಂತಿ ನಿನ್ನಲ್ಲಾಗಲಿ.

Verse 4

ಒಂದ್ಹೊತ್ತಿನಂತೆ ಪ್ರಾಣ
ಸಂದ್ಹೋಗುವ ಪ್ರಯಾಣ
ಮೇಲ್ಲೋಕ ಗುರಿಯೇ.
ಶಾಶ್ವತವಾದ ವಾಸ
ಪ್ರವೇಶೀಸೋ ಅಭ್ಯಾಸ
ನೀ ನಿತ್ಯ ಮಾಡು ಮನವೇ.

Go to top