Verse 1

ಈ ಹಗಲೀಗ ಸಂತು
ಎಲ್ಲೆಲ್ಲಿ ನಿದ್ದೆ ಬಂತು
ಭೂಜೀವರಾಶಿಗೆ
ಕರ್ತಂಗೆ ಸ್ತೋತ್ರ ಮಾಡ
ಆತಂಗೆ ಗೀತ ಹಾಡ
ನೀ ಎಚ್ಚತ್ತಿರು ಮನವೆ.

Verse 2

ನೀ ಸೂರ್ಯ ಕಂತಲಂದು
ದಿನಾರಿರಾತ್ರಿ ಬಂದು
ಕಾರ್ಗತ್ತಲಿಕ್ಕಿತು.
ಆದಾಗ್ಯೂ ಮನದಲ್ಲಿ
ಪ್ರಕಾಶವನ್ನು ಚೆಲ್ಲಿ
ಬೇರೊಬ್ಬ ಸೂರ್ಯನೆದ್ದನು.

Verse 3

ವಿಶಾಲಾಕಾಶದಲ್ಲಿ
ಭಂಗಾರಕಾಂತಿಯಲ್ಲಿ
ತಾರಾತಿತೇಜವು
ನಾನೂ ಪ್ರಕಾಶಿಸೇನು
ನಾ ಹಾಗೆ ಹೊಳೆದೇನು
ಈ ಕೀಳಲೋಕ ಬಿಡಲು.

Verse 4

ಶರೀರ ಕಷ್ಟ ಬಿಟ್ಟು
ವಸ್ತ್ರಾದಿ ತೆಗೆದಿಟ್ಟು
ವಿಶ್ರಾಂತಿ ಪಡುತೆ
ಸೌಂದರ್ಯ ವಸ್ತ್ರವನ್ನು
ಶೃಂಗಾರಪೂರ್ತಿಯನ್ನು
ಕೊಡೋನು ಕ್ರಿಸ್ತನೆಮಗೆ.

Verse 5

ಕಷ್ಟಾಂತ ಬರಲಾಯ್ತು
ಸಂತೋಷವೇಳೆಯಾಯ್ತು
ಬೇಸತ್ತ ಅಂಗಕೆ.
ಕಡೇಲಿ ಎಂಥ ಸುಖ
ಈ ಪಾಪ ಕಷ್ಟ ದುಃಖ
ಸಮಾಪ್ತವಾಗಿ ಹೋಗಲೆ.

Verse 6

ಸಾಕೆಂತ ಬಿದ್ದಿದ್ದೇನೆ
ವಿಶ್ರಾಂತಿ ಕೊಡುತೇನೆ
ಬೇಸತ್ತ ದೇಹಕೆ.
ಆಯಾಸ ಮುಗಿಯೋದು
ಶರೀರಕೊದಗೋದು
ಭೂಗರ್ಭದಲ್ಲಿ ಹಾಸಿಗೆ.

Verse 7

ನಾ ಕಣ್ಣು ಮುಚ್ಚಲಾಗಿ
ದೇಹಾತ್ಮ ವೊಲ್ಮೆಯಾಗಿ
ಕಾಯೋವನ್ಯಾವನು?
ನೀ ಕರ್ತ ದಯಗೊಂಡು
ದೇಹಾತ್ಮ ಕಾದುಕೊಂಡು
ಕೇಡೆಲ್ಲ ಪರಿಹರಿಸು.

Verse 8

ಉಭಯ ರೆಕ್ಕೆಯನ್ನು
ಬಿದಿರ್ಚಿ ಮರಿಯನ್ನು
ಕ್ರಿಸ್ತ್ಯೇಸು ಹೊದಗು.
ವಿರೋಧಿ ಮೋಸವನ್ನು
ಹೀನೈಸಿ ದೂತರನ್ನು
ಸಹಾಯಕಾಗಿ ಕಳುಹು.

Go to top