Verse 1

ಕ್ರಿಸ್ತ್ಯೇಸುವೊಡನೇ
ನಾ ಕಾರ್ಯ ತೊಡಗೋದು
ಕ್ರಿಸ್ತ್ಯೇಸುವೊಡನೇ
ನಾ ಕಾರ್ಯ ಮುಗಿಸೋದು.
ಕಣ್ದೆರೆದಿರಲು
ಕಣ್ಮುಚ್ಚುವಾಗಲು
ಕ್ರಿಸ್ತ್ಯೇಸುವಲ್ಲಿಯೇ
ಹೃದ್ದೃಷ್ಟಿ ಇಹುದು.

Verse 2

ಕ್ರಿಸ್ತ್ಯೇಸುವಿದ್ದರೆ
ಸಂದೇಹ ಭೀತಿ ಏಕೆ?
ಕ್ರಿಸ್ತ್ಯೇಸು ಶಿಷ್ಯಗೆ
ಜಗದ್ವಿಚಾರವೇಕೆ?
ಕ್ರಿಸ್ತ್ಯೇಸು ದಯೆಯು
ಅಮಿತ ಭಾಗ್ಯವು
ಕ್ರಿಸ್ತ್ಯೇಸು ಸಾಮಿಪ್ಯ
ಆನಂದದಬ್ದಿಯು.

Verse 3

ಕ್ರಿಸ್ತ್ಯೇಸು ವಾಕ್ಯವು
ಅಮೂಲ್ಯ ಮಂತ್ರಘೋಷ
ಕ್ರಿಸ್ತ್ಯೇಸು ನೀತಿಯು
ಪವಿತ್ರ ತೇಜಪೋಷ
ಕ್ರಿಸ್ತ್ಯೇಸು ಮರೆಯು
ಅಭಯ ಸ್ಥಳವೇ.
ಕ್ರಿಸ್ತ್ಯೇಸುವಿರಲು
ಮೃತೀಲಿ ಜೀವವೇ.

Go to top