Verse 1

ನಿತ್ಯ ಲೋಕಕಾಂತಿಯೇ
ಮೂಡು ಪೂರ್ಣ ತೇಜದಿಂದ
ಸರ್ವಜ್ಯೋತಿಮೂಲವೇ
ನಿನ್ನ ಕಿರಣಂಗಳಿಂದ
ನಮ್ಮ ಎಲ್ಲ ಕತ್ತಲು
ಓಡಿಸು.

Verse 2

ಬೀಜ ಮೊಳೆಯುತ್ತದೆ
ಮಳೆ ಬಿದ್ದ ಭೂಮಿಯಲ್ಲಿ
ನಿನ್ನ ಮಂಜು ಬಿದ್ದರೆ
ನನ್ನ ಒಣ ಆತ್ಮದಲ್ಲಿ
ಹೊಸ ಜೀವತ್ರಾಣವು
ಬಪ್ಪುದು.

Verse 3

ಹೃದಯಂಗಳೊಳಗೆ
ನಿನ್ನ ಬೆಳಕನ್ನು ಹೊಯ್ದು
ವಾಕ್ಯಖಡ್ಗದಿಂದಲೆ
ನಮ್ಮ ಪಾಪಮೂಲ ಕೊಯ್ದು
ಜೀವದಲ್ಲಿ ನಮ್ಮನು
ಸೇರಿಸು.

Verse 4

ದಿವ್ಯ ಪ್ರೀತಿಸೂರ್ಯನೆ
ನಿನ್ನ ಕಿರಣಂಗಳನ್ನು
ಹಗೆ ತುಂಬಿದಿಳೆಗೆ
ಹೊಯ್ದು ಪ್ರೀತಿರಾಜ್ಯವನ್ನು
ಎಲ್ಲ ಭೂಮಿಯಲ್ಲಿಯು
ಸ್ಥಾಪಿಸು.

Verse 5

ನಿತ್ಯ ನೀತಿಸುರ್ಯನೆ
ನೀನು ಅಂತ್ಯ ದಿನದಲ್ಲಿ
ಭೂಸಮಾಧಿಯಿಂದಲೇ
ನಮ್ಮನೇಳ ಮಾಡುವಲ್ಲಿ
ನಿತ್ಯ ಮುಕ್ತಿ ನಮಗೆ
ಆಗುತೆ.

Go to top