Verse 1

ಹೊತ್ತಾರೆ ಕರ್ತ ನಿನಗೆ
ನಾನಡ್ಡ ಬೀಳ್ವೆನು
ಹೊತ್ತಾರೆ ನಿನ್ನ ಪೀಠಕೆ
ವಿಜ್ಞಾಪನೇಳ್ವದು.

Verse 2

ನಿನ್ನತಿಪ್ರಿಯ ನಾಮಕೆ
ಸಂಸ್ತುತಿ ಅರ್ಪಿಸಿ
ಸದ್ಭಕ್ತ ಸಭೆಯೆಡೆಗೆ
ನಾನೆಂದು ಸೇರಲಿ?

Verse 3

ನಿನ್ ವಾಕ್ಯ ನನ್ನ ಪಾದಕೆ
ಸುಜ್ಯೋತಿದೀಪವು
ಪಾಪಾತ್ಮ ಮೋಸಮಾಯೆಗೆ
ನನ್ನಾತ್ಮ ತಪ್ಪಿಸು.

Verse 4

ವಿಶ್ವಾಸಿಯನ್ನು ಕರ್ತನೆ
ನೀನಾಶೀರ್ವದಿಸು
ಗುರಾಣಿ ನಿನ್ನ ಕೃಪೆಯೇ
ಕಾಪಾಡು ನಿತ್ಯವು.

Go to top