Verse 1

ನನಾತ್ಮ ಎಚ್ಚತ್ತೇಳು
ಸರ್ವೇಶ ಸ್ತೋತ್ರ ಹೇಳು
ಸಮಸ್ತದಾನದತ
ಸದ್ಭಕ್ತಪಾಲನಾತ.

Verse 2

ಪಿಶಾಚಿ ಕತ್ತಲಲ್ಲಿ
ಕಾದಾಡ ಬಗೆದಲ್ಲಿ
ನೀನಡ್ಡಿ ಮಾಡಿ ಬಿಟ್ಟಿ
ನಂಗಾಗಿ ಕಾವಲಿಟ್ಟಿ.

Verse 3

ನಿನ್ನಾಜ್ಞೆಗನುಸಾರ
ನಂಗಾಯ್ತುಪಾಯಹಾರ.
ನಾ ಮಾಡಿ ಸುಖನಿದ್ದೆ
ಹೊತ್ತೇರಿದೊಡನೆದ್ದೆ.

Verse 4

ಸಂಗೀತ ಜಪ ಸ್ತೋತ್ರ
ನಾನರ್ಪಿಸುವ ಹೋತ್ರ.
ಸ್ವೀಕರಿಸೆಲ್ಲವನ್ನು
ಹರಸು ನೀ ನನ್ನನ್ನು.

Verse 5

ಕೊಟ್ಟಿಂದು ದೂತರನ್ನ
ಕಾಪಾಡಿ ರಕ್ಷಿಸೆನ್ನ
ಈಯ್ ಪರಮಾರ್ಥಸಿದ್ಧಿ
ಪ್ರಪಂಚ ಕರ್ಯವೃದ್ಧಿ.

Verse 6

ಸುದಾನ ಪೂರ್ತಿ ನೀಡು
ನನ್ನಾತ್ಮ ನಿನ್ನ ಬೀಡು
ಆಹಾರ ನಿನ್ನ ವಾಕ್ಯ
ನನ್ನಂತ್ಯ ಸ್ವರ್ಗಭಾಗ್ಯ.

Go to top