Verse 1

ಬಂಗಾರಾದಿತ್ಯ
ಭೂಮಿಲಿ ನಿತ್ಯ
ಪ್ರಕಾಶ ಚೆಲ್ಲಿ
ಮನಗಳಲ್ಲಿ
ಆನಂದಪೂರ್ತಿಯ ಹೊಯ್ಯುವನು.
ಸುಶಾಂತ ನಿದ್ದೆ
ನಾ ಮಾಡುತಲಿದ್ದೆ
ಈಗೇಳಲಾಗಿ
ಹೃತ್ಸಂತಸವಾಗಿ
ದಿವಕೆ ಮುಖವನೆತ್ತಿದೆನು.

Verse 2

ಹಾಡೊಣ ಬನ್ನಿ
ಕರ್ತಂಗೆ ತನ್ನಿ
ದಾನಂಗಳನ್ನು
ಸಮಸ್ತವನ್ನು
ಕರ್ತನಿಗರ್ಪಿಸ ಯೋಗ್ಯವದೆ.
ಪ್ರಾಮುಖ್ಯ ದಾನ
ಇಗೋ ನಮ್ಮ ಪ್ರಾಣ
ದೀನ ನಿರ್ಭೀತ
ಹೃದ್ವೀಣೆಯ ಗೀತ
ಉತ್ತಮ ಧೂಪವು ಕರ್ತನಿಗೆ.

Verse 3

ಕೃಪೆಯ ವರ
ಕೇಡಿನ ಹರ
ದಿನದ ಕಾಂತಿ
ರಾತ್ರಿಯ ಶಾಂತಿ
ಆತನ ದಯೆಯ ಕೃತ್ಯಗಳು.
ಆತನು ತಂದ
ವಿಶ್ರಮವು ಚಂದ
ಏಳೋದಕಾಗಿ
ಸೂರ್ಯೋದಯವಾಗಿ
ಆತನ ದಯೆ ಪ್ರದರ್ಶಿಸೋನು.

Verse 4

ಕರ್ತಾ ನೀ ನನ್ನ
ಪಾಪಂಗಳನ್ನ
ಕಟಾಕ್ಷವಿಟ್ಟು
ಸುಟ್ಹಾಕಿ ಬಿಟ್ಟು
ದೇವರೆ ಮನ್ನಿಸು ದುಷ್ಟನಿಗೆ.
ಮುಂದಾಗೊ ಸುಖ
ಮತ್ತಾಗುವ ದುಃಖ
ನಿನ್ ಹಸ್ತದಲ್ಲಿ
ನೀನೆಲ್ಲವ ಬಲ್ಲಿ
ನಿನಗೆ ಎಲ್ಲವನೊಪ್ಪಿಸಿದೆ.

Go to top