Verse 1

ಕೊಂಡಾಡಿರೆಲ್ಲ
ನಮ್ಮ ಕರ್ತನನ್ನು
ಸಂತೋಷದಿಂದ
ಗೀತವನ್ನು ಹಾಡಿ
ಸಂಸ್ತುತಿ ಪ್ರಾರ್ಥನಾದಿ
ಯಜ್ಞ ಮಾಡಿ
ಕೊಂಡಾಡಿರೆಲ್ಲಾ.

Verse 2

ಸಂದ್ಹೋದ ರಾತ್ರಿ
ಪಿತೃಪ್ರೇಮದಿಂದ
ರಕ್ಷಿಸಿದ್ದಾನೆ
ಜೀವವಂ ಕಾಪಾಡಿ
ನಿದ್ರೆಯೊಳಿಂದ
ನಮ್ಮನ್ನೇಳ ಮಾಡಿ
ಕೊಂಡಾಡಿರೆಲ್ಲಾ.

Verse 3

ಆರೋಗ್ಯದಿಂದ
ನಾವೀಹೊತ್ತು ಎದ್ದು
ಕೈ ಕಾಲಿತ್ಯಾದಿ
ಇಂದ್ರಿಯವ್ಯಾಪಾರ
ಸ್ವಸ್ಥದಿಂದಿರೋದಾತನುಪಕಾರ
ಕೊಂಡಾಡಿರೆಲ್ಲಾ.

Verse 4

ರಕ್ಷಿಸುವಾತ
ಸರ್ವಸುಖದಾತ
ನೀನೆಮ್ಮ ಕರ್ತ
ಇನ್ನು ನಿನ್ನ ದಯ
ಹಗಲು ರಾತ್ರಿ
ಪಾಲಿಸೆಮಗಯ್ಯ
ಕೊಂಡಾಡುತ್ತೇವೆ.

Verse 5

ನಾವಿಂದು ಕರ್ತಾ
ನಿನ್ನ ಮರೆಯಲ್ಲಿ
ಸುಭದ್ರರಾಗಿ
ಚಿಂತೆ ಭಯ ಬಿಟ್ಟು
ಸಂಸಾರ ಮಾಡಲೀಸು
ದಯವಿಟ್ಟು
ಕೊಂಡಾದುತ್ತೇವೆ.

Verse 6

ನಿನ್ನ ಸದ್ವಾಕ್ಯ
ಹೇಳಿದಂತೆ ಮಾಡ
ನಮ್ಮೆಲ್ಲರಿಂಗೆ
ಬುದ್ಧಿಬಲವನ್ನು
ಕೊಟ್ಟು ಪ್ರತಿಷ್ಠೆ
ಮಾಡು ಮನಸನ್ನು
ಕೊಂಡಾಸುತ್ತೇವೆ.

Verse 7

ಭಕ್ತರ ಮೋಕ್ಷಾದಿತ್ಯ
ಮೂಡುವಲ್ಲಿ
ನಾವೂ ವಿಮುಕ್ತರಾಗಿ
ಕೃಪೆಯಿಂದ ದೂತರ
ಕೂಡ ಹರ್ಷಧ್ವನಿಯಿಂದ
ಕೊಂಡಾಡುತ್ತೇವೆ.

Go to top