Verse 1

ಹ್ಯಾಗೆ ನಾನ್ ಇಮ್ಮಾನುವೇಲೆ
ನಿನ್ನ ಸ್ತೋತ್ರ ಹಾಡಲಿ?
ಅನುದಿನ ಕೃಪೆ ಮೇಲೆ
ಕೃಪೆಯನ್ನು ಕೊಡುತಿ.
ನೀ ಸಹಾಯಕಾಗಿ ಬಂದಿ
ನೀನು ಅನ್ನಪಾನ ತಂದಿ
ಸಾಯುವಂಥ ಪಾಪಿಗೆ
ನನ್ನ ಪ್ರೀಯ ಮಿತ್ರನೆ.

Verse 2

ದೂರ ಹೋದೆ ದೂರದಿಂದ
ನೀನು ನನ್ನ ಕರೆದೆ.
ನರಕಾಗ್ನಿಹಾದಿಯಿಂದ
ನನ್ನನೆಳ್ದಿ ಯೇಸುವೇ.
ಈಗ ಸುಖ ಪಡುತೇನೆ
ನಿನ್ನ ದಾಸನಗಿದ್ದೇನೆ
ನಿನ್ನ ಪಾದ ಹಿಡಿದು
ಮುಕ್ತನಾಗಿರುವೆನು.

Verse 3

ಲೋಕಕಾಡಿನಲ್ಲಿ ಸುಖ
ನನಗೇನು ಸಿಕ್ಕಿತು?
ಒಳ್ಳೆ ಕುರುಬನ ಮುಖ
ನೋಡಿ ಸುಖ ಪಟ್ಟೆನು.
ನೀನೆ ದಿವ್ಯ ಯಜಮಾನ
ತೃಪ್ತಿ ಕ್ಷೇಮ ಸಮಾಧಾನ
ಕೊಡ ನೀನೆ ಶಕ್ತನು
ನಿತ್ಯ ದ್ರವ್ಯ ನಿನ್ನದು.

Verse 4

ನೀನು ಧೈರ್ಯ ಕೊಡಲಾಗಿ
ಚಿಂತೆ ನನಗಿಲ್ಲವು
ಕ್ರಿಸ್ತ ನಿನ್ನ ಭಕ್ತನಾಗಿ
ಸುಖದಿಂದಲಿರ್ವೆನು.
ನಿನ್ನದಧಿಕಾರವೆಲ್ಲ
ಸರ್ವಲೋಕ ಘನವೆಲ್ಲ
ನೀನು ಎಲ್ಲ ಆಳುತಿ
ನನ್ನ ನೀನೆ ಕಾಯುವಿ.

Go to top