Verse 1

ಕರ್ತ ಯಾವ ರೀತಿಯಿಂದ
ನಿನ್ನ ಸ್ತುತಿ ಮಾಡಲಿ?
ನನಗೀಗ ಮೇಲಿನಿಂದ
ತ್ರಾಣ ಕೊಡು ದಯದಿ.
ನಿನ್ನ ಪ್ರೀತಿ ಅತಿಶಯ
ಅತಿರಿಕ್ತ ನಿನ್ನ ದಯ.
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ.

Verse 2

ನಿನ್ನ ಸತ್ಯ ಪ್ರೀತಿ ತ್ರಾಣ
ದೃಢ ಅನುಗ್ರಹವು
ನನ್ನ ಹೃದದೆಕಧ್ಯಾನ
ನಿತ್ಯ ಹಗಲಿರುಳು.
ಗತಿಯೇನು? ನಿನ್ನ ಪಾದ
ಮುಕ್ತಿ? ನಿನ್ನ ಆಶೀರ್ವಾದ
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ.

Verse 3

ಜಾರಿ ನಿನ್ನ ಮಾರ್ಗದಿಂದ
ಪಾಪ ಹೆಚ್ಚು ಮಾಡಿದೆ
ನಿನ್ನ ದೀರ್ಘಶಾಂತಿಯಿಂದ
ಲಜ್ಜೆಯಾಯಿತೆನಗೆ.
ಕನಿಕರವುಳ್ಳ ತಂದೆ
ಕ್ಷಮೆಯನ್ನು ಬೇಡ ಬಂದೆ.
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ.

Verse 4

ಪೂರ್ಣ ಅನುಗ್ರಹದಿಂದ
ನೀನು ನನ್ನ ನಡಿಸಿ
ನಾನು ಹುಟ್ಟಿದಂದಿನಿಂದ
ದಯ ಮಾತ್ರ ಮಾಡಿದಿ.
ಪ್ರತಿಯಾಗಿ ಕೊಡಲೇನು?
ಹಂಗು ಹ್ಯಾಗೆ ಸಲ್ಲಿಸೇನು?
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ.

Verse 5

ನನ್ನ ಭಕ್ತಿಯಂ ಪರೀಕ್ಷೆ
ಮಾಡ ನೀನು ಯೋಚಿಸಿ
ಈಗ ಪ್ರೀತಿ ಆಗ ಶಿಕ್ಷೆ
ನನಗಾಗ ಮಾಡಿದಿ.
ಅದೆನೀಗ ನಿನ್ನ ದಾಸ
ನಿನ್ನ ಚಿತ್ತ ನನ್ನಭ್ಯಾಸ.
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ.

Verse 6

ಪ್ರಿಯ ತಂದೆ ಪೂರ್ಣ ಪ್ರೀತಿ
ನೀನು ಮಾಡಿದೆನಗೆ.
ನಿನ್ನ ದಯವುಳ್ಳ ರೀತಿ
ಯೇಸು ರುಚಿ ನೋಡಿದೆ.
ಆತ್ಮ ನಿನ್ನ ಶುದ್ಧ ಕಾಂತಿ
ನನಗೆಂದಿಗೂ ವಿಶ್ರಾಂತಿ.
ಲಕ್ಷ ಸ್ತೋತ್ರ ನಿನಗೆ
ಆಗಲೆನ್ನ ದೇವರೆ.

Go to top