Verse 1

ನನ್ನಾತ್ಮವೇ ಯೆಹೋವನನ್ನು
ಕೊಂಡಾಡಿ ದಿವ್ಯ ನಾಮವನ್ನು
ವಿನಯವಾಗಿ ಸ್ತುತಿಸು.
ಸರ್ವೇಶನತಿಕೃಪೆಯನ್ನು
ಸಮಸ್ತ ಉಪಕಾರವನ್ನು
ನೀ ಧ್ಯಾನಮಾಡು ನಿತ್ಯವು.
ಯೆಹೋವ ಪಾಪರೋಗವನ್ನು
ಸಂಪೂರ್ಣ ಸ್ವಸ್ಥ ಮಾಡಿದ
ಯೆಹೋವ ಆತ್ಮಶಾಂತಿಯನ್ನು
ಕೊಟ್ಟೋಡಿಸೋನು ಭಯವ.

Verse 2

ಯೆಹೋವ ದಿವ್ಯ ಕೃಪೆಯಿಂದ
ಆಶ್ಚರ್ಯವಾದ ಸ್ನೇಹದಿಂದ
ಸಂತೃಪ್ತಿ ಮಾಡ ಬಲ್ಲನು.
ಉತ್ಥಾನದೊಳ್ ಸಮಾಧಿಯಿಂದ
ನಾವೆದ್ದು ದೇವಹಸ್ತದಿಂದ
ಕಿರೀಟ ಪಡಕೊಂಬೆವು.
ಯೆಹೋವ ಬಡ ಜನರನ್ನು
ಯಾವಾಗ್ಯೂ ನಡಿಸುವನು
ಸದಾತ್ಮ ಭಕ್ತಸಭೆಯನ್ನು
ಆನಂದ ಪಡಿಸುವನು.

Verse 3

ನಮ್ಮಲ್ಲಿ ಬಿದ್ದ ಶಾಪವನ್ನು
ನಮ್ಮಾತ್ಮದೇಹವ್ಯಥೆಯನ್ನು
ಯೆಹೋವನೆಲ್ಲ ತಿಳಿದು
ನಮ್ಮಪರಾಧ ತೆಗೆದ್ಹಾಕಿ
ನಮ್ಮನ್ನು ಮಕ್ಕಳೆಂತ ಸಾಕಿ
ಸ್ವೀಕಾರ ಮಾಡಿಕೊಂಡನು.
ನನ್ನಾತ್ಮವೇ ಸಂಗೀತ ಹಾಡು
ಭೂಪರಲೋಕರಾಜಗೆ
ಕಟಾಕ್ಷನಿಧಿ ಸ್ತೋತ್ರ ಮಾಡು
ವಿಮುಕ್ತವಾದ ಮನವೆ.

Go to top