Verse 1

ನನ್ನಾತ್ಮ ಕರ್ತನನ್ನು
ಅಸಕ್ತಿಯಿಂದ ಸ್ತುತಿಸು.
ಕೃಪಾತಿಶಯವನ್ನು
ನೀ ಮರ್ಯದಿರು ಎಂದಿಗು.
ನಿನ್ನೀಶ ನಿನ್ನ ಪಾಪ
ತಾನ್ ಹೊತ್ತು ದೇಹದೋಳ್
ಸಮಸ್ತ ನಿನ್ನ ಶಾಪ
ತಾನ್ ತಾಳ್ದ ಕ್ರೂಜೆಯೊಳ್.
ಸದ್ಭಕ್ತ ನಿಂದೆಯನ್ನು
ತಾಳ್ ಇನ್ನು ಯೆಸುವು
ಸ್ವರಾಜ್ಯಮನವನ್ನು
ಸುಭಕ್ತಗೀಯ್ವನು.

Verse 2

ಪವಿತ್ರ ನ್ಯಾಯವನ್ನು
ಯೆಹೋವ ನಮಗಿತ್ತನು
ಆದಾಗ್ಯೂ ಕೃಪೆಯನ್ನು
ಕೊಡೋನು ಶಾಂತಿಯರಸು.
ವಿನಾಶ ಗೈವ ಸಿಟ್ಟು
ತಾ ಬಿಟ್ಟು ರಕ್ಷಕ
ಕಾಯೋನು ದಯವಿಟ್ಟು
ದೀನಾತ್ಮಜನವ.
ಪೂರ್ವಕ್ಕೆ ಎಷ್ಟು ದೂರ
ಇರೋದು ಪಶ್ಚಿಮ
ಮಾಡೋನು ಅಷ್ಟು ದೂರ
ನಮ್ಮಪರಾಧವ.

Verse 3

ಸುಪಿತೃ ಮಕ್ಕಳಿಂಗೆ
ಎಂಬಂತೆ ಕರ್ತ ದೇವರು
ಸ್ವಕೀಯ ಭಕ್ತರಿಂಗೆ
ಕಟಾಕ್ಷವಿಡುತಿಹನು.
ನಮ್ಮನ್ನು ಆತ ಬಲ್ಲ
ಮಣ್ಣೆಮ್ಮ ಕಾಯವು
ನಾಂ ಗಟ್ಟಿಯವರಲ್ಲ
ಹೂವಂತೆ ಇಹೆವು.
ಹೊತ್ತೇರಿ ಕಾಯಲಾಗಿ
ಅದಿಲ್ಲಧೋಗೊದು
ಬರೋದು ಶೀಘ್ರವಾಗಿ
ಮನುಷ್ಯನಂತ್ಯವು.

Verse 4

ದಿವ್ಯಾನುಗ್ರಹವೊಂದೆ
ಯಾವಾಗ್ಯೂ ಸ್ಥಿರವಾದದು.
ಸದ್ಭಕ್ತರಿಂಗಿದೊಂದೆ
ಪ್ರತೀಕ್ಷಾಬಲದುರ್ಗವು.
ಯೆಹೋವನಳುತಾನೆ
ಭೂಪರಲೋಕದಿ
ನಮ್ಮಪ್ಪನಾಗಿದ್ದಾನೆ
ಇಂಪಾಗಿ ಹಾಡಿರಿ
ಈ ದೊಡ್ಡ ನಾಮವನ್ನು
ಬಲಿಷ್ಠ ದೂತರೇ
ನೀನೂ ಯೆಹೋವನನ್ನು
ಕೊಂಡಾಡೆನ್ನಾತ್ಮವೇ.

Go to top