Verse 1

ನನ್ನ ದೇವರೊಲ್ಮೆಯನ್ನು
ನೋಡಿ ಹಾಡದಿರಲೋ?
ಕೃಪೆಯಿಂದ ಸಭ್ಯರನ್ನು
ಆಳುತಾನೆ ಅಲವೋ?
ದೇವಹೃತ್ತು ಮೇರೆಯನ್ನು
ಮರ್ತು ಪ್ರೀತಿ ಮಾಳ್ಪುದು
ಆತ ಕಾಯ ಶಕ್ತನು
ದಾಸರಾದ ಭಕ್ತರನ್ನು
ಎಲ್ಲಾ ತೀರಿಹೋದರು
ದೇವ ಪ್ರೀತಿ ತೀರದು.

Verse 2

ಹದ್ದು ತನ್ನ ಮರಿ ಮೇಲೆ
ರೆಕ್ಕೆ ಹೊದಿಯುತ್ತದೆ
ಹಾಗೆನ್ನನ್ನು ಎಷ್ಟೋ ವೇಳೆ
ದೇವಹಸ್ತ ಮುಚ್ಚುತೆ.
ಆತ ತಾಯ್ಯ ಗರ್ಭದಲ್ಲಿ
ನನ್ನನುಂಟು ಮಾಡಿದ
ಇಂದಿಗೆನಗಿರುವ
ಜೀವವಿಹುದಾತನಲ್ಲಿ.
ಎಲ್ಲಾ ತೀರಿಹೋದರು
ದೇವಪ್ರೀತಿ ತೀರದು.

Verse 3

ನನ್ನಲಿಟ್ಟ ಪ್ರೀತಿಯಿಂದ
ಪುತ್ರನ್ನನು ಕೊಟ್ಟನು
ದೇವ ಪುತ್ರರಕ್ತದಿಂದ
ನರಕಾಗ್ನಿ ಅರಿತು.
ದೇವಪ್ರೀತಿಗಳವಿಲ್ಲ
ಇಲ್ಲವೆನ್ನು ಮನವೆ.
ನಿನ್ನ ಅಲ್ಪ ಬುದ್ಧಿಗೆ
ನೆಲವೆಂದೂ ಕಣೋದಿಲ್ಲ.
ಎಲ್ಲಾ ತೀರಿಹೋದರು
ದೇವ ಪ್ರೀತಿ ತೀರದು.

Verse 4

ವಾಗ್ಮುಖಾಂತ್ರ ತಂದೆಯಿಂದ
ಬಂದ ಶುದ್ಧ ಆತ್ಮನು
ಪರಕೆನಗಿಹದಿಂದ
ಹಾದಿ ತೋರಿಸುವನು.
ಈತ ನನ್ನ ಮನಸನ್ನು
ಸಲೆ ಬೆಳಕಾಗಿಸಿ
ಮೃತಿ ಜೈಸಿ ಘನದಿ
ಗೆಲ್ಲುತಾನೆ ನರ್ಕವನ್ನು.
ಎಲ್ಲಾ ತೀರಿಹೋದರು
ದೇವ ಪ್ರೀತಿ ತೀರದು.

Verse 5

ಕಾಯುತಾನೆ ಭದ್ರವಾಗಿ
ನನ್ನ ಆತ್ಮಸುಖವ
ಮೈಗವಶ್ಯವಿರಲಗಿ
ಬಪ್ಪುದನ್ನವಸನ.
ಲೋಕದಲ್ಲಿ ಬುದ್ಧ್ಯುಪಾಯ
ಕಾಣದಿರೆ ಹೆದರೆ
ಬಲಹೀನ ದಾಸಗೆ
ಈಯ್ವನೀಶನೇ ಸಹಾಯ.
ಎಲ್ಲಾ ತೀರಿಹೋದರು
ದೇವ ಪ್ರೀತಿ ತೀರದು.

Verse 6

ಭೂಮ್ಯಾಕಾಶಬಲಸೇನೆ
ನನ್ನ ಸೇವೆಗಿಟ್ಟನು.
ತುಂಬಾ ತೃಪ್ತನಾಗುತೇನೆ
ಕಂಡದೆಲ್ಲ ನನ್ನದು.
ಗುಡ್ಡ ಹಳ್ಳ ಕಡಲ್ ರೇವು
ಪೃಥ್ವಿ ಅಂತರಿಕ್ಷವು
ಎಲ್ಲ ನನ್ನೆದೆಲ್ಲಿಯೂ
ದೇವರಿತ್ತನೆಂಗೆ ಮೇವು.
ಎಲ್ಲಾ ತೀರಿಹೋದರು
ದೇವಪ್ರೀತಿ ತೀರದು.

Verse 7

ಎಂದೂ ಚಿಂತೆ ಮಾಡಲಾರೆ
ಕಷ್ಟ ತೀರೆ ಮಲಗಿ
ಭದ್ರವಾಗಿದ್ದೇನ್ ಹೊತ್ತಾರೆ
ಏಳುತ್ತೇನೆ ಸುಖದಿ.
ನನ್ನನ್ನನುಗ್ರಹದಿಂದ
ದೇವ ಕಾಯದಿದ್ದರೆ
ನನಗೆಲ್ಲಿ ರಕ್ಷಣೆ
ನಾನಾ ಉಪದ್ರಂಗಳಿಂದ?
ಎಲ್ಲಾ ತೀರಿಹೋದರು
ದೇವ ಪ್ರೀತಿ ತೀರದು.

Verse 8

ತಂದೆ ನಿಜಪುತ್ರನನ್ನು
ತಳ್ಳಿ ಬಿಡಲೊಲ್ಲನು
ಮಗುವಲ್ಲಿ ದೋಷವನ್ನು
ಕಂಡದನ್ನು ಕೊಲ್ಲನು.
ಕ್ರೂರ ಕತ್ತಿಯಿಂದ ಅಲ್ಲ
ಬೆತ್ತದಿಂದ ಹೊಡೆದು
ದಯಾಪೂರ್ಣ ದೇವರು
ಸಿದ್ಧಿಗೆನ್ನ ತರ ಬಲ್ಲ.
ಎಲ್ಲಾ ತೀರಿಹೋದರು
ದೇವ ಪ್ರೀತಿ ತೀರದು.

Verse 9

ನಾನು ಪೆಟ್ಟು ತಿನ್ನುವಾಗ
ಕಣ್ಣೀರೆಂಗೆ ಬಪ್ಪುದು.
ಮತ್ತೆ ಬುದ್ಧಿ ಹುಟ್ಟಿದಾಗ
ನಂಬಿ ಧೈರ್ಯವಹೆನು.
ಲೋಕ ನನ್ನ ಹೃತ್ತು ಕದ್ದು
ಕೊಳ್ಳಧಾಗೆ ಶಿಕ್ಷೆಯೆ
ಬೇಕು ಹೆಡ್ಡ ಮಗಗೆ
ಕ್ರೂಜೆ ನನಗೊಳ್ಳೆ ಮದ್ದು.
ಎಲ್ಲಾ ತೀರಿಹೋದರು
ದೇವ ಪ್ರೀತಿ ತೀರದು.

Verse 10

ದುಃಖ ಪಟ್ಟರೂ ಅಭಯ
ಕೊಡೊ ವಾಕ್ಯ ಸ್ಥಿರವೆ
ಶ್ರಮೆ ತೀರಿದಾಗ ದಯ
ಹೊಂದಿ ತೃಪ್ತನಾಗುವೆ.
ಶಿಕ್ಷಾವೃಷ್ಟಿ ಬೀಳುವಾಗ
ಪ್ರೀತಿಸೂರ್ಯ ತೊರನು.
ಮತ್ತೆ ಕಾಂತಿ ಕೊಡೋನು
ಪಾಪಮೇಘ ಹರಿದಾಗ.
ಎಲ್ಲಾ ತೀರಿಹೋದರು
ದೇವ ಪ್ರೀತಿ ತೀರದು.

Verse 11

ನಿನ್ನ ಪ್ರೀತಿಗಳವಿಲ್ಲ
ನಾನು ಹ್ಯಾಗು ಹೆದರೆ.
ನೀನು ತಳ್ಳಿ ಬಿಡೊದಿಲ್ಲ
ಮಗನನ್ನು ತಂದೆಯೆ.
ಜೀವವೆನಗಿರುವಲ್ಲಿ
ದಯೆಯಿಂದ ನನ್ನನು
ಗಟ್ಟಿ ನೆಲೆಗೊಳ್ಳಿಸು
ನಿನ್ನ ದಿವ್ಯ ಪ್ರೀತಿಯಲ್ಲಿ.
ಇಹ ಕಳೆಯುತ್ತಲೆ
ಪ್ರೀತಿಯೈಕ್ಯಕ್ಹೋಗುವೆ.

Go to top